ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಷ್ಟವಾಗಿರುವುದನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದೀರಿ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ತಾಳ್ಮೆಯಿರಲಿ.
ವೃಷಭ: ವಿವಿಧ ಚಟುವಟಿಕೆಗಳಿಂದ ಕೂಡಿದ ದಿನವಿಂದು. ಬಹಳ ದಿನಗಳಿಂದ ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡುವಿರಿ. ದೇವತಾ ಪ್ರಾರ್ಥನೆ ಮಾಡಿ.
ಮಿಥುನ: ಉದ್ಯೋಗ, ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಲಿದೆ. ದೂರದ ವ್ಯವಹಾರಗಳಿಂದ ಧನಾಗಮನವಾಗಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ.
ಕರ್ಕಟಕ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವ್ಯಾಪಾರೀ ವರ್ಗದವರಿಗೆ ಸಾಲಗಾರರಿಂದ ಮುಕ್ತಿ ಸಿಗುವುದು. ಕಿರು ಸಂಚಾರ ಮಾಡಬೇಕಾಗುತ್ತದೆ.
ಸಿಂಹ: ಸರಕಾರೀ ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದರಿಂದ ಮಾನಸಿಕವಾಗಿ ನೆಮ್ಮದಿಯಾಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
ಕನ್ಯಾ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಗಳನ್ನು ಜಾರಿಗೆ ತರಲಿದ್ದೀರಿ. ಸಂಗಾತಿಯ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ಹೊಸ ಉದ್ಯೋಗಾವಕಾಶಗಳು ಕೂಡಿಬರಲಿವೆ. ತಾಳ್ಮೆ, ಸಂಯಮ ಅಗತ್ಯ.
ತುಲಾ: ಅಧ್ಯಯನ ಪ್ರವೃತ್ತರಿಗೆ ನೂರಾರು ಅವಕಾಶಗಳು ಸಿಗಲಿವೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕೋರ್ಟು ಕಚೇರಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.
ವೃಶ್ಚಿಕ: ಅನಿವಾರ್ಯ ಕಾರಣಗಳ ನಿಮಿತ್ತ ಅಧಿಕ ಖರ್ಚು ವೆಚ್ಚಗಳಾದೀತು. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ದಂಪತಿಗಳಲ್ಲಿ ಪರಸ್ಪರ ಹೊಂದಾಣಿಕೆ ಕೊರತೆ ಕಂಡುಬಂದೀತು. ತಾಳ್ಮೆಯಿರಲಿ.
ಧನು: ಪಾಲುದಾರಿಕಾ ವ್ಯವಹಾರದಲ್ಲಿ ಸ್ಪಷ್ಟತೆ ಇರಲಿ. ಬೇರೆಯವರ ಸಲಹೆಗಳು ಪಥ್ಯವಾಗದೇ ಹೋಗಬಹುದು. ಹೊಸದಾಗಿ ಆರಂಭಿಸಿದ್ದ ವ್ಯವಹಾರದಲ್ಲಿ ಅಡೆತಡೆಗಳು ಬಂದೀತು. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ: ಸರಕಾರೀ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಫಲ ಕಂಡುಬರಲಿದೆ. ಸ್ವಯಂ ವ್ಯಾಪಾರಿಗಳಿಗೆ ಆರ್ಥಿಕವಾಗಿ ಏಳಿಗೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
ಮೀನ: ಸಣ್ಣ ಪುಟ್ಟ ಸಮಸ್ಯೆಗಳೇ ದೊಡ್ಡದಾಗಿ ಕಾಡಬಹುದು. ಹಿಂದೆ ಮಾಡಿದ್ದ ಸಾಲ ಪಾವತಿ ಮಾಡಲು ಕಷ್ಟಪಡಬೇಕಾಗುತ್ತದೆ. ನೆರೆಹೊರೆಯವರಿಂದ ಸಹಾಯ ಒದಗಿಬರಲಿದೆ. ಕುಲದೇವರ ಪ್ರಾರ್ಥನೆ ಮಾಡಿ.