ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶುಕ್ರವಾರ, 7 ಏಪ್ರಿಲ್ 2023 (08:10 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬಂದೀತು. ದೇಹಾರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರ. ಕಿರು ಸಂಚಾರ ಮಾಡಲಿದ್ದೀರಿ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ಅಡೆತಡೆಗಳು ಬಂದರೂ ಅಂತಿಮ ಜಯ ನಿಮ್ಮದಾಗಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆಯ ಯೋಗ. ತಾಳ್ಮೆಯಿರಲಿ.

ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಬರಲಿವೆ. ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಡಿ. ವಾಹನ, ಭೂಮಿ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕರ್ಕಟಕ: ನಿಮ್ಮಲ್ಲಿರುವ ಕ್ರಿಯಾತ್ಮಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಯಂತ್ರೋಪಕರಣಗಳಿಂದ ತೊಂದರೆ ಎದುರಾಗುವ ಸಾಧ‍್ಯತೆ. ಎಚ್ಚರಿಕೆ ಅಗತ್ಯ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಸಿಂಹ: ಕಾರ್ಯರಂಗದಲ್ಲಿ ಹಿತಶತ್ರುಗಳ ಕಾಟ ಕಂಡುಬಂದೀತು. ಕ್ರಿಯಾತ್ಮಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ದಿನದಂತ್ಯಕ್ಕೆ ಸಂತೋಷದ ಸುದ್ದಿ.

ಕನ್ಯಾ: ಸರಕಾರೀ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಅಪರಿಚಿತರಿಂದಲೂ ಸಹಾಯ ಸಿಗಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಅನಗತ್ಯ ಚಿಂತೆ ಬೇಡ.

ತುಲಾ: ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ವಿವಾಹ ಯೋಗ ಕಂಡುಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಅನಿರೀಕ್ಷಿತ ಬಂಧು ಮಿತ್ರರನ್ನು ಭೇಟಿಯಾಗುವ ಯೋಗ.

ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಸಾಧ‍್ಯತೆ. ಸಂಗಾತಿಯ ಸಲಹೆಗಳು ಉಪಯೋಗಕ್ಕೆ ಬರಲಿವೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ದುಂದು  ವೆಚ್ಚಗಳಿಗೆ ಕಡಿವಾಣವಿರಲಿ.

ಧನು: ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ. ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಮಕರ: ಯೋಗ್ಯ ವಯಸ್ಕರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಸಹೋದರಾದಿ ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯತೆ.

ಕುಂಭ: ಗೃಹ, ವಾಹನ ರಿಪೇರಿ ಇತ್ಯಾದಿ ಕೆಲಸಗಳಿಗೆ ಹಣಕಾಸಿನ ಖರ್ಚು ವೆಚ್ಚ ಕಂಡುಬರಲಿದೆ. ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ. ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಹಸಗಳಿಗೆ ಕೈ ಹಾಕಲಿದ್ದೀರಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಾಳ್ಮೆಯಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ