ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 23 ಮೇ 2023 (07:50 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜವಾಬ್ಧಾರಿ ಹೆಗಲಿಗೇರಲಿದೆ. ಸಹೋದರ ಸಮಾನರಿಂದ ಸಹಾಯ ಒದಗಿಬರುವುದು. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ ಕಂಡುಬರಲಿದೆ. ತಾಳ್ಮೆಯಿರಲಿ.

ವೃಷಭ: ಪರವೂರಿನ ವ್ಯವಹಾರಗಳಿಂದ ಚಿಂತೆ ಹೆಚ್ಚಾದೀತು. ಸ್ನೇಹಿತರ ಸಹಾಯ ಪಡೆಯಲಿದ್ದೀರಿ. ದಾಂಪತ್ಯದಲ್ಲಿ ಪರಸ್ಪರ ಸಹಕಾರವಿರಲಿ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಂಡುಬರುವುದು. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮಿಥುನ: ಅಧಿಕ ಪರಿಶ್ರಮದಿಂದ ದೇಹಾಯಾಸವಾಗುವ ಸಾಧ‍್ಯತೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನೆರೆಹೊರೆಯವರಿಂದ ಸಹಾಯ ಒದಗಿಬರಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಕರ್ಕಟಕ: ಉದ್ಯೋಗ, ವ್ಯವಹಾರದಲ್ಲಿ ಪಾರದರ್ಶಕತೆಗೆ ಅವಕಾಶ ಕೊಡಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಬಹಳ ದಿನಗಳ ನಂತರ ಹಳೆಯ ಮಿತ್ರರನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಓದಿನದಲ್ಲಿ ಏಕಾಗ್ರೆತೆಯ ಕೊರತೆ.

ಸಿಂಹ: ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ನೆಂಟರಿಷ್ಟರ ಆಗಮನ ಸಾಧ್ಯತೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಕಾರ್ಯರಂಗದಲ್ಲಿ ಅಧಿಕ ಪರಿಶ್ರಮದಿಂದ ಕೂಡಿದ ದಿನ. ಭೂಮಿ, ಆಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮದಾಗುವುದು. ದಾಂಪತ್ಯದಲ್ಲಿ ಸುಖ, ಸಮೃದ್ಧಿಯಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ಸರಕಾರೀ ನೌಕರರಿಗೆ ಅನಿರೀಕ್ಷಿತ ಸ್ಥಾನ ಪಲ್ಲಟವಾಗುವ ಸಾಧ‍್ಯತೆ. ಮೇಲಧಿಕಾರಿಗಳಿಂದ ಹೆಚ್ಚಿನ ಜವಾಬ್ಧಾರಿ ಸಿಕ್ಕೀತು. ಮಹಿಳೆಯರಿಗೆ ಅಡುಗೆ ಮನೆ ಕೆಲಸಗಳಲ್ಲಿ ತೊಂದರೆಗಳಾಗುವ ಸಾಧ‍್ಯತೆ. ಎಚ್ಚರಿಕೆಯಿರಲಿ.

ವೃಶ್ಚಿಕ: ಕೃಷಿಕರಿಗೆ ವ್ಯವಹಾರದಲ್ಲಿ ಕೊಂಚ ಸಮಾಧಾನಕರ ಮುನ್ನಡೆ. ಸಂಗಾತಿಯ ಸಲಹೆಗಳನ್ನು ಪಾಲಿಸುವುದು ಉತ್ತಮ. ಇಷ್ಟ ಭೋಜನ ಮಾಡುವ ಯೋಗ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ಧನು: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿಬರಲಿದೆ. ಇನ್ನೊಬ್ಬರಿಗೆ ಹಣಕಾಸಿನ ನೆರವು ನೀಡುವ ಮೊದಲು ಪರಾಮರ್ಶಿಸಿ. ಸಂತಾನಹೀನ ದಂಪತಿಗಳು ದೇವರಮೊರೆ ಹೋಗಲಿದ್ದಾರೆ. ತಾಳ್ಮೆಯಿರಲಿ.

ಮಕರ: ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಾನಸಿಕವಾಗಿ ಋಣಾತ್ಮಕ ಯೋಚನೆಗಳಿಗೆ ಅವಕಾಶ ಕೊಡಬೇಡಿ. ಉದ್ಯೋಗ, ವ್ಯವಹಾರದಲ್ಲಿ ಏನೇ ಆದರೂ ಅದರಿಂದ ನಿಮಗೆ ಒಳಿತೇ ಆಗಲಿದೆ.

ಕುಂಭ: ಹಿಂದೆ ಮಾಡಿದ್ದ ಒಳ್ಳೆಯ ಕೆಲಸಗಳ ಫಲ ಅನುಭವಿಸಲಿದ್ದೀರಿ. ಕಳೆದೇ ಹೋಯಿತು ಎಂದಿದ್ದ ವಸ್ತುಗಳು ತಾನಾಗಿಯೇ ಕೈ ಸೇರಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಚಿಂತೆ ಬೇಡ.

ಮೀನ: ಕೌಟುಂಬಿಕವಾಗಿ ನಿಮ್ಮ ಕೆಲಸಗಳಿಗೆ ಪರಸ್ಪರ ಸಹಕಾರ ಕಂಡುಬರಲಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ