ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬುಧವಾರ, 21 ಜೂನ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ನಿಮ್ಮ ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಅಸಮಾಧಾನ ಆಕ್ರೋಶಕ್ಕೆ ಕಾರಣವಾಗಬಹುದು. ಸಂಗಾತಿಯೊಂದಿಗೆ ಸಮಾಧಾನ ಚಿತ್ತದಿಂದ ಇರುವುದು ಉತ್ತಮ. ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಂಡುಬಂದೀತು.

ವೃಷಭ: ವಾಕ್ಚತುರತೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಮುನ್ನಡೆ. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.

ಮಿಥುನ: ಯೋಗ್ಯ  ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗ. ಸಾಂಸಾರಿಕವಾಗಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ.

ಕರ್ಕಟಕ: ವೈಯಕ್ತಿಕ ಜೀವನದಲ್ಲಿ ಕೆಲವು ಬದಲಾವಣೆಗೆ ಸಿದ್ಧರಾಗಿ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗ. ಕೃಷಿಕರಿಗೆ ಬೆಳೆ ನಷ್ಟದ ಚಿಂತೆ ಕಾಡೀತು. ತಾಳ್ಮೆಯಿರಲಿ.

ಸಿಂಹ: ಎಷ್ಟೇ ಪ್ರಯತ್ನಪಟ್ಟರೂ ಕೆಲವೊಂದು ಅನಾಹುತಗಳನ್ನು ತಡೆಯಲಾಗದು. ಕೌಟುಂಬಿಕವಾಗಿ ಪರಸ್ಪರ ಸಹಕಾರವಿರಲಿದೆ. ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ.

ಕನ್ಯಾ: ಯಾವುದೇ ವಿಚಾರವನ್ನು ಮಕ್ತವಾಗಿ ಹಂಚಿಕೊಳ್ಳುವ  ಪ್ರವೃತ್ತಿ ತೋರುವಿರಿ. ಮಕ್ಕಳ ಸಂತೋಷದಲ್ಲಿ ಭಾಗಿಯಾಗಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ದೇವಾಲಯ ಸಂದರ್ಶನ ಮಾಡುವಿರಿ.

ತುಲಾ: ಅಧಿಕ ಧನ ಸಂಪಾದನೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಅನಿರೀಕ್ಷಿತವಾಗಿ ನೆಂಟರಿಷ್ಟರ ಭೇಟಿ ಸಾಧ‍್ಯತೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಪಲ್ಲಟವಾಗುವ ಸಾಧ‍್ಯತೆ.

ವೃಶ್ಚಿಕ: ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳು ಶಿಕ್ಷಕ ವೃಂದದವರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ನಿಮ್ಮ ಅಭ್ಯಾಸಗಳಲ್ಲಿ ಕೆಲವು ಬದಲಾವಣೆ ತರಬೇಕಾಗಬಹುದು.

ಧನು: ಸರಕಾರೀ ನೌಕರರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾದೀತು. ಇನ್ನೊಬ್ಬರ ಸಮಸ್ಯೆಗೆ ಹೆಗಲು ಕೊಡಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಣೆಯಾಗಲಿದೆ. ತಾಳ್ಮೆಯಿರಲಿ.

ಮಕರ: ದೇವತಾ ಕಾರ್ಯಗಳಿಗೆ ಹೊರಟಿದ್ದರೆ ಕೆಲವು ವಿಘ್ನಗಳು ಬಂದು ಅರ್ಧಕ್ಕೇ ನಿಲ್ಲುವ ಸಂಭವ. ಹಿರಿಯರ ಸಲಹೆ ಪಾಲಿಸುವುದು ಉತ್ತಮ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವ ಸಾಧ‍್ಯತೆ.

ಕುಂಭ: ಅಧಿಕ ಕೆಲಸದೊತ್ತಡದಿಂದ ಕೌಟುಂಬಿಕ ವಿಚಾರಕ್ಕೆಗಮನ ಹರಿಸಲಾಗದೇ ಅಸಹಾಯಕರಾಗಲಿದ್ದೀರಿ. ಸಂಗಾತಿಯ ಸಹಕಾರ ಪಡೆಯಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ಮೀನ: ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಕಾರ್ಯನಿಮಿತ್ತ ಪರವೂರಿಗೆ ಸಂಚರಿಸುವ ಸಾಧ‍್ಯತೆ. ವಾಹನ, ಭೂಮಿ ಖರೀದಿ ಯೋಜನೆಗಳನ್ನು ಮುಂದೂಡಬೇಕಾದೀತು. ದಿನದಂತ್ಯಕ್ಕೆ ನೆಮ್ಮದಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ