ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 22 ಜೂನ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಸಾಂಸಾರಿಕವಾಗಿ ಕೆಲವೊಂದು ಸಂದಿಗ್ಧತೆಗಳು ಕಾಡಲಿವೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ತಾಳ್ಮೆಯಿರಲಿ.

ವೃಷಭ: ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿನ ಜವಾಬ್ಧಾರಿ ನಿಮ್ಮ ಹೆಗಲಿಗೇರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳಬೇಡಿ.

ಮಿಥುನ: ಜವಾಬ್ಧಾರಿಯುತ ಕೆಲಸಗಳಿಂದ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಅವಿವಾಹಿತರಿಗೆ ಉತ್ತಮ ವೈವಾಹಿಕ ಸಂಬಂಧಗಳು ಹುಡುಕಿಕೊಂಡು ಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕರ್ಕಟಕ: ನಿಮ್ಮ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಜನರಿರುತ್ತಾರೆ. ಎಚ್ಚರಿಕೆಯಿರಲಿ. ಹೊಸದಾಗಿ ಮದುವೆಯಾಗಿದ್ದವರಿಗೆ ಮಧು ಚಂದ್ರ ಭಾಗ್ಯ. ವ್ಯಾಪಾರಸ್ಥರಿಗೆ ವ್ಯವಹಾರ ಸುಗಮವಾಗಲಿದೆ.

ಸಿಂಹ: ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ಮರಳಿ ಸಹಾಯ ಮಾಡುವ ಯೋಗ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಕನ್ಯಾ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾಗಲಿದೆ. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ನೀರು, ಬೆಂಕಿಯಿಂದ ಅಪಾಯವಾಗುವ ಸಾಧ‍್ಯತೆ. ಎಚ್ಚರಿಕೆಯಿರಲಿ.

ತುಲಾ: ಕಷ್ಟಕಾಲದಲ್ಲಿ ಆಪತ್ ಬಾಂಧವರಾದವರನ್ನು ಮರೆಯದೇ ಪ್ರತಿಫಲ ನೀಡಲಿದ್ದೀರಿ. ಭೂಮ್ಯಾದಿ ವ್ಯವಹಾರಗಳಿಗೆ ತೊಡಕು ಕಂಡುಬಂದೀತು. ಸರಕಾರೀ ಲೆಕ್ಕಪತ್ರಗಳ ಬಗ್ಗೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮಾಡಿ.

ವೃಶ್ಚಿಕ: ನಿಮ್ಮ ಬಹುದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಸಂಗಾತಿಯ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗುತ್ತದೆ.

ಧನು: ಅನ್ಯರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಿ ಅಪವಾದಕ್ಕೆ ಗುರಿಯಾಗುವ ಸಾಧ‍್ಯತೆ. ನಿರುದ್ಯೋಗಿಗಳಿಗೆ ಸರಕಾರೀ ಉದ್ಯೋಗದ ಯೋಗವಿದೆ. ವಾಹನ ಖರೀದಿಸುವ ನಿಮ್ಮ ಕನಸು ಸದ್ಯದಲ್ಲೇ ನನಸಾಗಲಿದೆ.

ಮಕರ: ಕಾರ್ಯರಂಗದಲ್ಲಿ ಕೊಂಚ ಮೈಮರೆತರೂ ತಕ್ಕ ಬೆಲೆ ತೆರಬೇಕಾದೀತು. ಉದ್ಯೋಗಿಗಳು ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡಲಿದ್ದಾರೆ. ಇಷ್ಟ ಭೋಜನ ಮಾಡುವ ಯೋಗ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಿಮ್ಮಲ್ಲಿರುವ ಕುಂದು ಕೊರತೆಗಳು ಇನ್ನೊಬ್ಬರಿಗೆ ಕಾಣದಂತೆ ಎಚ್ಚರಿಕೆ ವಹಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಬೇಡ. ಹಳೆಯ ಬಾಕಿಗಳು ಪಾವತಿಯಾಗಲಿದೆ. ಅನಗತ್ಯ ಚಿಂತೆ ಬೇಡ.

ಮೀನ: ಎಷ್ಟೇ ಪ್ರಯತ್ನಪಟ್ಟರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬ ಚಿಂತೆ ಕಾಡೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ. ಮಕ್ಕಳಿಂದ ಸಂತೋಷ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ