ಊಟ ಮಾಡುವಾಗ ತಟ್ಟೆ ಕೈಯಲ್ಲಿ ಹಿಡಿಯಲೇಬೇಡಿ!

ಗುರುವಾರ, 15 ಅಕ್ಟೋಬರ್ 2020 (09:09 IST)
ಬೆಂಗಳೂರು: ಈಗ ಎಲ್ಲದಕ್ಕೂ ಅವಸರ. ಎಲ್ಲರೂ ಅವಸರದ ಯುಗದಲ್ಲೇ ಇದ್ದಾರೆ. ಯಾರಿಗೂ ತಾಳ್ಮೆ ಎಂಬುದೇ ಇಲ್ಲ. ಊಟದ ವಿಚಾರದಲ್ಲೂ ಇದೇ ಕತೆ. ಸಮಾರಂಭಗಳಲ್ಲೂ ತಟ್ಟೆ ಕೈಯಲ್ಲಿ ಹಿಡಿದು ಊಟ ಮಾಡುವ ಪದ್ಧತಿ ಸಾಮಾನ್ಯವಾಗಿದೆ.


ಆದರೆ ಊಟ ಮಾಡುವಾಗ ತಟ್ಟೆಯನ್ನು ಕೈಯಲ್ಲಿ ಹಿಡಿದು ತಿನ್ನುವುದು ಅನ್ನಪೂರ್ಣೆಗೆ ಅಪಚಾರ ಮಾಡಿದಂತೆ. ಇನ್ನು ಕೆಲವರು ಮಡಿಲಿನಲ್ಲಿ ತಟ್ಟೆ ಇಟ್ಟುಕೊಂಡು ಟಿವಿ, ಮೊಬೈಲ್ ನೋಡುತ್ತಾ ತಿಂಡಿ, ಊಟ ಮಾಡುತ್ತಾರೆ. ಈ ರೀತಿ ಮಾಡುವುದು ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ. ಹೀಗಾಗಿ ಊಟ ಮಾಡುವಾಗ ನೆಲ ಅಥವಾ ಟೇಬಲ್ ಮೇಲೆ ತಟ್ಟೆ ಇಟ್ಟುಕೊಂಡು ಕ್ರಮವಾಗಿ ಊಟ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ