ಅದೃಷ್ಟ ಖುಲಾಯಿಸಲು ಕೆಲವು ಟಿಪ್ಸ್‌ಗಳು

ಶುಕ್ರವಾರ, 24 ಜೂನ್ 2016 (12:47 IST)
ಈ ಜಗತ್ತಿನಲ್ಲಿ ವ್ಯಕ್ತಿಯೊಬ್ಬ ಪ್ರಾಮಾಣಿಕವಾಗಿ ಶ್ರಮಿಸಿ ಸತತವಾಗಿ ದುಡಿದರೆ ಯಾವುದನ್ನಾದರೂ ಸಾಧಿಸಬಹುದು ಮತ್ತು ಪವಾಡಗಳು ಕೂಡ ಜರುಗುತ್ತದೆ. ಯಶಸ್ಸಿನ ರಹಸ್ಯವು ಒಂದು ಕೆಲಸವನ್ನು ಮುಗಿಸಲು ಅವರು ತೋರಿಸುವ ನಿಷ್ಠೆಯ ಪ್ರಮಾಣವನ್ನು ಅವಲಂಬಿಸಿದೆ.   ಇಡೀ ಜಗತ್ತು ಆಗುವುದಿಲ್ಲ ಎಂದು ಹೇಳುತ್ತಿದ್ದರೆ ನೀವು ಆಗುತ್ತದೆಂದು ಸಾಬೀತು ಮಾಡಿ 
ತೋರಿಸಿ, ಜಗತ್ತು ಸಾವಿರಾರು ರೀತಿಯಲ್ಲಿ ಆಗುವುದಿಲ್ಲ ಎಂದು ಹೇಳಬಹುದು. 
 
 ಪ್ರತಿಯೊಂದು ಇಲ್ಲ ಎಂಬ ಪದವು ನಿಮ್ಮ ವಿಶ್ವಾಸವನ್ನು ಸ್ವಲ್ಪ ಸ್ವಲ್ಪವೇ ಕುಂದಿಸಿ ನೀವು ಸಂಪೂರ್ಣವಾಗಿ ತ್ಯಜಿಸುತ್ತೀರಿ. ನಿಮಗೆ ಜಗತ್ತು ಇಲ್ಲವೆಂದು ಹೇಳಿದರೂ ನೀವು ಇದೆಯೆಂದು ಸಾಬೀತು ಮಾಡಿ ತೋರಿಸಿ. ಇದಲ್ಲದೇ ಕೆಲವು ಅಂಶಗಳು ನಿಮ್ಮ ಯಶಸ್ಸನ್ನು ಎರಡು ಪಟ್ಟು ಹೆಚ್ಚಿಸುತ್ತದೆ. ನಿಮ್ಮ ಅದೃಷ್ಟವನ್ನು 
ಸೃಷ್ಟಿಸಲು ಆಚಾರ್ಯ ವಿನೋದ್ ಇವುಗಳನ್ನು ಸೂಚಿಸುತ್ತಾರೆ.
 
1. ಕುಟಂಬದ ಮುಖ್ಯಸ್ಥರು ಮನೆಯ ಪಶ್ಚಿಮ ಅಥವಾ ನೈರುತ್ಯದ ಭಾಗಕ್ಕೆ ತಲೆಇಟ್ಟುಕೊಂಡು 
ಮಲಗಬೇಕು.
2. ಮಲಗುವ ಕೋಣೆಯಲ್ಲಿ ಹಣದ ಪೆಟ್ಟಿಗೆಯನ್ನು ಇರಿಸಬಾರದು
2. ನಿಮ್ಮ ಉದ್ಯೋಗದ ಅಥವಾ ವ್ಯವಹಾರದ ಸ್ಥಳದಲ್ಲಿ ಇಂಗ್ಲೀಷ್ U ಆಕಾರದ ಕುದುರೆ ಲಾಳವನ್ನು ನೇತುಹಾಕುವುದರಿಂದ ಅದೃಷ್ಟ ಮತ್ತು ಹಣಕಾಸಿನ ಲಾಭ ತಂದುಕೊಡುತ್ತದೆ.
 
4. ನಿಮ್ಮ ಉದ್ಯೋಗದ ಸ್ಥಳದ ಕೋಣೆಯ ಬಾಗಿಲಿನಲ್ಲಿ ಗಡಿಯಾರ ಅಥವಾ ಕ್ಯಾಲೆಂಡರ್ 
ನೇತುಹಾಕಿದರೆ ಉದ್ವೇಗ ಮತ್ತು ದುರಾದೃಷ್ಟ ತರಬಹುದು.
5. ಮಂಗಳವಾರ ಸಾಲ ತೆಗೆದುಕೊಳ್ಳಬೇಡಿ. ಮಂಗಳವಾರ ಸಾಲ ತೆಗೆದುಕೊಂಡರೆ ಅದನ್ನು 
ಹಿಂತಿರುಗಿಸಲು ಕಷ್ಟವಾಗುತ್ತದೆ.
 
6. ಬುಧವಾರ ಸಾಲಕೊಡುವುದನ್ನು ತಪ್ಪಿಸಿ. ಬುಧವಾರ ಸಾಲ ಕೊಟ್ಟರೆ ಅದು ವಾಪಸು ಬರುವುದು 
ಕಷ್ಟವಾಗುತ್ತದೆ.
 
7. ಕಚೇರಿಯಿಂದ ಮನೆಗೆ ಹಿಂತಿರುಗುವಾಗ ಬರಿಗೈಯಲ್ಲಿ ಮನೆಗೆ ಪ್ರವೇಶಿಸಬೇಡಿ. ತಿನಿಸು, 
ಪುಸ್ತಕ ಅಥವಾ ನಿಯತಕಾಲಿಕೆ ಮುಂತಾದ ದಿನನಿತ್ಯ ಬಳಸುವ ವಸ್ತುಗಳನ್ನು ಒಯ್ಯಿರಿ. ಅದು 
ಸಾಧ್ಯವಾಗದಿದ್ದರೆ ಯಾವುದೇ ಮರದ ಎಲೆಗಳನ್ನಾದರೂ ಒಯ್ಯಿರಿ. 
 
8.ಮನೆಯಿಂದ ಹೊರಕ್ಕೆ ಹೋಗುವಾಗ ಮುಖ್ಯದ್ವಾರದಿಂದ ಬಲಗಾಲನ್ನಿಟ್ಟು ನಿರ್ಗಮಿಸಿ.
9. ಸಂಜೆ ಅಥವಾ ರಾತ್ರಿಯಲ್ಲಿ ಉಗುರುಗಲನ್ನು ಅಥವಾ ಕೂದಲನ್ನು ಕತ್ತರಿಸಬೇಡಿ. ಇದು ವ್ಯಕ್ತಿಗೆ 
ದುರಾದೃಷ್ಟವನ್ನು ತರುತ್ತದೆ.

 10. ಅದೃಷ್ಟಕ್ಕಾಗಿ ಬೆಳಿಗ್ಗೆ ಎದ್ದಕೂಡಲೇ ಎರಡೂ ಕೈಗಳನ್ನು ನೋಡಿಕೊಂಡು ನಿಮ್ಮ ಮುಖವನ್ನು 
3-4 ಬಾರಿ ಉಜ್ಜಿಕೊಳ್ಳಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ