ಯಾವ ಬೆರಳಿಗೆ ಯಾವ ಉಂಗುರು ತೊಟ್ಟುಕೊಳ್ಳಬೇಕು?

ಶನಿವಾರ, 7 ಡಿಸೆಂಬರ್ 2019 (08:53 IST)
ಬೆಂಗಳೂರು: ನಿಮ್ಮ ಜಾತಕದಲ್ಲಿರುವ ಗ್ರಹಗತಿಗೆ ಅನುಗುಣವಾಗಿ ಯಾವ ಬೆರಳಿಗೆ ಯಾವ ಉಂಗುರ ಧರಿಸಿದರೆ ನಿಮಗೆ ಒಳಿತಾಗುತ್ತದೆ ನೋಡೋಣ.


ಕಿರು ಬೆರಳು: ಬುಧಗ್ರಹ ನೀಚನಾಗಿದ್ದರೆ ಹಸಿರು ಪಚ್ಚೆಯ ಬೆಳ್ಳಿ ಅಥವಾ ಚಿನ್ನದ ಉಂಗುರು ಧರಿಸಬಹುದು.
ಚಂದ್ರ ಗ್ರಹ ನೀಚನಾಗಿದ್ದರೆ ಇದೇ ಬೆರಳಿಗೆ ಬಿಳಿ ಮುತ್ತಿನ ಹರಳನ್ನು ಧರಿಸಬಹುದು.
ಉಂಗುರ ಬೆರಳು: ಸೂರ್ಯ ಗ್ರಹ ನೀಚನಾಗಿದ್ದರೆ ಮಾಣಿಕ್ಯದ ಹರಳನ್ನು ಚಿನ್ನದಲ್ಲೇ ಧರಿಸಬೇಕು.
ಮಂಗಳ ಅಥವಾ ಕುಜ ಗ್ರಹ ನೀಚನಾಗಿದ್ದರೆ ಕೆಂಪು ಹವಳದ ಹರಳಿನ ಉಂಗುರವನ್ನು ತಾಮ್ರದಲ್ಲಿ ಧರಿಸಿದರೆ ಉತ್ತಮ.
ಶುಕ್ರ ಗ್ರಹ ನೀಚನಾಗಿದ್ದರೆ ಡೈಮಂಡ್ ಹರಳನ್ನು ಚಿನ್ನದಲ್ಲಿ ಇದೇ ಬೆರಳಿಗೆ ಧರಿಸಬಹುದು.
ಮಧ್ಯಮ ಬೆರಳು: ಶನಿ ನೀಚನಾಗಿದ್ದರೆ ನೀಲಿ ಪಚ್ಚೆ ಹರಳನ್ನು ರಾಹುವಿಗೆ ಸಂಬಂಧಿಸಿದಂತೆ ಗೋಮೆದುಕ ಹರಳನ್ನು ಮತ್ತು ಕೇತುವಿಗೆ ಸಂಬಂಧಿಸಿದಂತೆ ವೈಢೂರ್ಯದ ಹರಳನ್ನು ಇದೆ ಬೆರಳಿಗೆ ಚಿನ್ನದಲ್ಲಿ ಧರಿಸಿ.
ತೋರು ಬೆರಳು: ಗುರು ಗ್ರಹ ನೀಚನಾಗಿದ್ದರೆ ಹಳದಿ ಪುಷ್ಯರಾಗ ಹರಳನ್ನು ತೋರು ಬೆರಳಿಗೆ ಚಿನ್ನದಲ್ಲಿ ಧರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ