ಬೆಂಗಳೂರು: ನಮ್ಮ ಪುರಾಣಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಹಿಳೆಯರು ಮಾಡಬಾರದು ಎನ್ನಲಾಗುತ್ತದೆ. ಆದರೆ ಇದೆಲ್ಲಾ ಗೊಡ್ಡು ನಂಬಿಕೆ ಎಂದು ಕೆಲವರು ಹೇಳಬಹುದು. ಆದರೆ ಹಿರಿಯರು ಹೀಗೆ ಹೇಳಿರುವುದಕ್ಕೆ ಅರ್ಥವಿದೆ.
ಮಹಿಳೆಯರು ಕುಂಬಳ ಕಾಯಿ ಒಡೆಯಬಾರದು ಎನ್ನುತ್ತಾರೆ. ಇದು ಹಾಗೇ ಸುಮ್ಮನೇ ಹೇಳಿರುವುದಲ್ಲ. ಈ ಸಂದರ್ಭದಲ್ಲಿ ಗರ್ಭಚೀಲ ಕೆಳಕ್ಕೆ ಜಾರುವ ಅಪಾಯವಿರುತ್ತದೆ ಎನ್ನುವ ಕಾರಣಕ್ಕೆ ಹೀಗೆ ಹೇಳಲಾಗುತ್ತದೆ. ಅದೇ ರೀತಿ ಗಾಯತ್ರಿ ಮಂತ್ರ ಉಚ್ಛಾರಣೆಯನ್ನು ಮಹಿಳೆಯರು ಮಾಡಿದರೆ ಅವರಿಗೆ ಗರ್ಭಕ್ಕೆ ಸಂಬಂಧಿಸಿದ ಸಮಸ್ಯೆ ಬರಬಹುದು ಎನ್ನಲಾಗುತ್ತದೆ.