ಬಾಳೆಗಿಡಗಳಿಗೆ ಮದುವೆ ಮಾಡಿಸುವುದು ಯಾಕೆ?

Krishnaveni K

ಶುಕ್ರವಾರ, 2 ಫೆಬ್ರವರಿ 2024 (12:36 IST)
WD
ಬೆಂಗಳೂರು: ಜಾತಕದಲ್ಲಿರುವ ಎರಡು ಮದುವೆ ಯೋಗ ದೋಷ ನಿವಾರಣೆಗೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪರಿಹಾರ ಕಾರ್ಯಗಳಿಗೆ. ಅದರಲ್ಲಿ ಬಾಳೆ ಗಿಡಗಳಿಗೆ ಮದುವೆ ಮಾಡುವ ಕದಳೀ ವಿವಾಹ ಪರಿಹಾರ ಒಂದು.

ಮಹಿಳೆಯರಿಗೆ ಜಾತಕದಲ್ಲಿ ಕುಜ ದೋಷ ಅಥವಾ ಎರಡು ಮದುವೆ ಯೋಗವಿದ್ದಾಗ ಕುಂಭ ವಿವಾಹ ಮಾಡಲಾಗುತ್ತದೆ. ಮಡಕೆಯನ್ನು ಮಹಾವಿಷ್ಣುವಿನ ಪ್ರತಿರೂಪವಾಗಿ ಕಲ್ಪಿಸಿಕೊಂಡು ಯುವತಿಗೆ ಮದುವೆ ಶಾಸ್ತ್ರಗಳನ್ನು ಮಾಡಿ ದೋಷ ಕಳೆಯಲಾಗುತ್ತದೆ. ಕೊನೆಯಲ್ಲಿ ಕುಂಭವನ್ನು ನೀರಿನಲ್ಲಿ ಬಿಟ್ಟು ಮದುವೆ ಶಾಸ್ತ್ರ ಸಂಪನ್ನಗೊಳಿಸಲಾಗುತ್ತದೆ. ಅದೇ ರೀತಿ ಪುರುಷರಿಗೆ ಕದಳೀ ವಿವಾಹ ಕಾರ್ಯ ಮಾಡಲಾಗುತ್ತದೆ.

ಕದಳೀ ವಿವಾಹವೆಂದರೇನು?
ಪುರುಷರಲ್ಲಿ ಎರಡು ಮದುವೆ ಯೋಗ ಅಥವಾ ಕುಜದೋಷವಿದ್ದಾಗ ಕದಳೀ ವಿವಾಹ ಮಾಡಲಾಗುತ್ತದೆ. ಬಾಳೆ ಗಿಡವನ್ನು ವಧುವಿನಂತೆ ಸಿಂಗರಿಸಿ ವಿವಾಹ ಯೋಗ್ಯ ಪುರುಷನ ಜೊತೆ ವಿವಾಹದ ವಿಧಿ  ವಿಧಾನಗಳನ್ನು ಮಾಡಲಾಗುತ್ತದೆ. ತಾಳಿ ಶಾಸ್ತ್ರ, ಹೂ ಮಾಲೆ ಶಾಸ್ತ್ರ ಇತ್ಯಾದಿ ಮಾಡಿ ಬಳಿಕ ಆ ಬಾಳೆಗಿಡವನ್ನು ಕಡಿದು ಹಾಕುವ ಮೂಲಕ ಮದುವೆ ಮುರಿದು ಬಿದ್ದಂತೆ ಶಾಸ್ತ್ರ ಮಾಡಲಾಗುತ್ತದೆ. ಆ ಮೂಲಕ ಆ ವರನ ಜಾತಕದಲ್ಲಿದ್ದ ದೋಷ ನಿವಾರಣೆ ಮಾಡಲಾಗುತ್ತದೆ.

ಜಾತಕದಲ್ಲಿ ರಾಹು-ಶುಕ್ರ, ರಾಹು-ಬುಧ, ರಾಹು-ಶನಿ-ಶುಕ್ರ ಯೋಗವಿದ್ದಾಗ ದೋಷ ಪರಿಹಾರ ಮಾಡಬೇಕಾಗುತ್ತದೆ. ಇಂತಹ ವರನಿಗೆ ಎರಡು ಮದುವೆ, ಮದುವೆಯಾದ ನಂತರ ಪತ್ನಿ ವಿಯೋಗ, ವಿಚ್ಛೇದನ ಅಥವಾ ಮದುವೆಗೆ ವಿಳಂಬಗಳು ಇದ್ದಾಗ ಕದಳೀ ವಿವಾಹ ಶಾಸ್ತ್ರ ಮಾಡಬೇಕಾಗುತ್ತದೆ. ನಿಮ್ಮ ಕುಲಪುರೋಹಿತರು ಅಥವಾ ಜ್ಯೋತಿಷಿಗಳ ಸಲಹೆ ಪಡೆದು ಈ ಶಾಸ್ತ್ರವನ್ನು ಮಾಡಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ