ಬೆಂಗಳೂರು: ಪ್ರತಿನಿತ್ಯ ಸಂಧ್ಯಾವಂದನೆ ಮಾಡುವ ಕ್ರಮವನ್ನು ಕೆಲವರು ಇಂದಿಗೂ ಉಳಿಸಿಕೊಂಡಿದ್ದಾರೆ. ಈ ರೀತಿ ಸಂಧ್ಯಾವಂದನೆ ಮಾಡುವುದರ ಮಹತ್ವವೇನು ಗೊತ್ತಾ?
ಸಂಧ್ಯಾವಂದನೆ ನಮ್ಮಲ್ಲಿ ಒಂದು ರೀತಿಯ ಶಿಸ್ತು ಮೂಡಿಸುತ್ತದೆ ಸರಿಯಾದ ಸಮಯದಲ್ಲಿ ದಿನದಲ್ಲಿ ಮೂರು ಬಾರಿ ಸಂಧ್ಯಾವಂದನೆ ಮಾಡುವುದರಿಂದ ಒಂದು ರೀತಿಯ ಶಿಸ್ತು ತಂತಾನೇ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ.
ಸಂಧ್ಯಾವಂದನೆಯಲ್ಲಿ ಸಂಕಲ್ಪ ಮತ್ತು ಪ್ರವರ ಹೇಳುವುದರಿಂದ ನಮ್ಮ ಪೂರ್ವಜರೊಡನೆ ಸಂಬಂಧ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಪ್ರಾಣಾಯಾಮ ಮತ್ತು ಗಾಯತ್ರೀ ಮಂತ್ರವನ್ನು ದಿನದಲ್ಲಿ 6 ಬಾರಿ ಪಠಿಸುವುದರಿಂದ ನಮ್ಮ ಮಾನಸಿಕ ಆತಂಕಗಳು ಶಾಂತವಾಗುತ್ತದೆ. ಪ್ರಾತಃಕಾಲದಲ್ಲಿ ಮತ್ತು ಸಂಜೆಯಲ್ಲಿ ಸಂದ್ಯಾವಂದನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ