ಉಪವಾಸವಿದ್ದು ಶಿವ-ಪಾರ್ವತಿಯ ಪೂಜೆ ಮಾಡಿದರೆ ಮುತ್ತೈದೆಯರಿಗೆ ಶ್ರೇಷ್ಠ
ಇಂದು ಉಪವಾಸ ವ್ರತ ಕೈಗೊಂಡು ಶಿವ ಪಾರ್ವತಿಯರಿಗೆ ಬಿಲ್ವ ಪತ್ರೆಯಿಂದ ಅರ್ಚಿಸಿ ಪೂಜೆ ಮಾಡಿದರೆ ಮುತ್ತೈದೆ ಭಾಗ್ಯ ಗಟ್ಟಿಯಾಗುತ್ತದೆ. ಅಂತೆಯೇ ದಾಂಪತ್ಯದಲ್ಲಿನ ವಿರಸ, ಹೊಂದಾಣಿಕೆ ಕೊರತೆ, ಭಿನ್ನಾಭಿಪ್ರಾಯಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ.
ಮದುವೆಯಾಗದ ಕನ್ಯಾಮಣಿಗಳು ಇಂದು ಶಿವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಶಿವನಂತೆಯೇ ಅನುರೂಪನಾದ ಪತಿ ಸಿಗುತ್ತಾನೆ ಎಂಬುದು ನಂಬಿಕೆ.