ಮನೆಗೆ ಶಂಖ ತರುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಸೋಮವಾರ, 17 ಡಿಸೆಂಬರ್ 2018 (09:01 IST)
ಬೆಂಗಳೂರು: ಮಹಾವಿಷ್ಣುವಿಗೆ ಪ್ರಿಯವಾದ ಶಂಖವನ್ನು ಮನೆಗಳಲ್ಲಿ ಇಡುವುದು ಒಂದು ಪೂಜಿಸಲು ಮತ್ತೊಂದು ಪ್ರತಿನಿತ್ಯ ಪ್ರಾರ್ಥನೆ ಸಮಯದಲ್ಲಿ ಶಂಖ ಊದಲು.


ಶಂಖವನ್ನು ಮನೆಗೆ ತರುವ ಮೊದಲು ಕೆಲವು ಟಿಪ್ಸ್ ಗಳನ್ನು ಪಾಲಿಸಲೇಬೇಕು. ಶಂಖವನ್ನು ಒಂದೇ ಆಗಿ ಮನೆಗೆ ತರಬಾರದು. ಎರಡು ಶಂಖಗಳನ್ನು ತಂದು ದೇವರ ಮನೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಇರಿಸಬೇಕು.

ಪೂಜಿಸುವ ಶಂಖಕ್ಕೆ ಪೂಜೆಗೆ ಮೊದಲು ಪವಿತ್ರ ನದಿ ನೀರಿನಿಂದ ಶುದ್ಧೀಕರಿಸಿ ಪೂಜೆ ಮಾಡಿದರೆ ಉತ್ತಮ. ಊದುವ ಶಂಖಕ್ಕೆ ಯಾವತ್ತೂ ನೀರು ಹಾಕಬಾರದು. ಇದನ್ನು ಹಳದಿ ಬಟ್ಟೆಯ ಮೇಲಿಟ್ಟುಕೊಂಡರೆ ಉತ್ತಮ. ಇನ್ನು ಮನೆಯಲ್ಲಿ ಶಿವಲಿಂಗವಿದ್ದರೆ ಶಂಖವನ್ನು ಯಾವತ್ತೂ ಶಿವಲಿಂಗಕ್ಕಿಂತ ಎತ್ತರದಲ್ಲಿ ಇರಿಸಬಾರದು. ಹಾಗೆಯೇ ಶಿವಲಿಂಗಕ್ಕೆ ಶಂಖದಿಂದ ನೀರು ಅರ್ಪಣೆ ಮಾಡಬಾರದು. ಇವಿಷ್ಟನ್ನು ನೆನಪಿಟ್ಟುಕೊಂಡು ಮನೆಗೆ ಶಂಖ ತಂದು ಪೂಜೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ