ದೀಪಗಳನ್ನು ಬೆಳಗುವಾಗ ಈ ವಿಚಾರ ನೆನಪಿರಲಿ

ಶುಕ್ರವಾರ, 2 ಆಗಸ್ಟ್ 2019 (08:54 IST)
ಬೆಂಗಳೂರು: ದೀಪಗಳು ಅದೃಷ್ಟದ ಸಂಕೇತ. ಒಂದು ವೇಳೆ ನಿಮಗೆ ಯಾರಾದರೂ ದೀಪವನ್ನು ಉಡುಗೊರೆಯಾಗಿ ನೀಡಿದರೆ ತುಂಬ ಹೃದಯದಿಂದ ಸ್ವೀಕರಿಸಿ. ಇದರಿಂದ ಶುಭವಾಗುತ್ತದೆ.


ಶುಕ್ರವಾರಗಳಂದು ದೇವಿಯ ಮುಂದೆ ದೀಪವನ್ನು ಎಳ್ಳೆಯಿಂದ ಬೆಳಗಿದರೆ ಒಳ್ಳೆಯದು. ಕಾರ್ತಿಕ ಮಾಸದಲ್ಲಿ ಮನೆಯ ಮುಂದೆ ದೀಪಗಳನ್ನು ಬೆಳಗುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಇದರಿಂದ ಮನೆಗೆ ಅಷ್ಟೈಶ್ವರ್ಯಗಳು ಬರುತ್ತವೆ ಎಂಬ ನಂಬಿಕೆ.

ಯಾವಾಗಲೂ ದೀಪಕ್ಕೆ ಅರಿಶಿನ-ಕುಂಕುಮ ಮತ್ತು ಗಂಧದ ಪುಡಿಯನ್ನು ಹಚ್ಚಿ ಉರಿಸಿ. ದೀಪಕ್ಕೆ ಹೂವುಗಳನ್ನು ಅರ್ಪಿಸಿ. ದೀಪವನ್ನು ಹಚ್ಚುವ ಮುನ್ನ ಗಣಪತಿಯನ್ನು ಮತ್ತು ಕುಲದೇವರನ್ನು ಪ್ರಾರ್ಥಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ