ಗ್ರಹಗಳ ಸ್ಥಾನಕ್ಕನುಗುಣವಾಗಿ ನಿಮ್ಮ ಮಾತಿನ ಗುಣ ಹೇಗಿದೆ ತಿಳಿಯಿರಿ!

ಬುಧವಾರ, 2 ಅಕ್ಟೋಬರ್ 2019 (07:27 IST)
ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತ ಒಡೆದರೆ ಹೋಯಿತು ಎಂಬ ಮಾತಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಆಡುವ ಮಾತಿನಿಂದಲೇ ತಿಳಿಯಬಹುದು. ಇಂತಹ ಮಾತಿಗೆ ಯಾರು ಅಧಿಪತಿ, ಯಾವ ಗ್ರಹ ಮಾತಿನ ನಿಯಂತ್ರಕ ಎಂದು ತಿಳಿಯೋಣ.


ಮಾತಿಗೆ ಶುಭ ಗ್ರಹಗಳಾದ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳು ಕಾರಣ. ಜಾತಕ ಕುಂಡಲಿಯಲ್ಲಿ ಲಗ್ನದಿಂದ ಎರಡನೇ ಮನೆ ಮಾತಿಗೆ ಅಧಿಪತಿ. ಎರಡನೇ ಮನೆಯಲ್ಲಿ ಯಾವ್ಯಾವ ಗ್ರಹಗಳು ಇದ್ದರೆ ಮಾತು ಹೇಗಿರುತ್ತವೆ ಎಂದು ನೋಡೋಣ.

ಎರಡನೇ ಮನೆಯಲ್ಲಿ ಚಂದ್ರ, ಗುರು, ಶುಕ್ತ
ಕುಂಡಲಿಯಲ್ಲಿ ಎರಡನೇ ಮನೆಯಲ್ಲಿ ಚಂದ್ರ, ಗುರು ಮತ್ತು ಶುಕ್ರ ಗ್ರಹ ಇದ್ದರೆ ಅಂಥವರು ಅತಿ ಮಧುರವಾಗಿ ಮಾತನಾಡುವವರು ಹಾಗೂ ಅವರ ಮಾತಿನಲ್ಲಿ ಪ್ರೀತಿ, ವಿನಯ ತುಂಬಿರುತ್ತದೆ. ಇವರಿಂದ ಯಾರಿಗೂ ಬೇಜಾರಾಗಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ