ಗ್ರಹಗಳ ಸ್ಥಾನಕ್ಕನುಗುಣವಾಗಿ ನಿಮ್ಮ ಮಾತಿನ ಗುಣ ಹೇಗಿದೆ ತಿಳಿಯಿರಿ!

ಭಾನುವಾರ, 6 ಅಕ್ಟೋಬರ್ 2019 (05:35 IST)
ಬೆಂಗಳೂರು: ಮಾತು ಆಡಿದರೆ ಹೋಯಿತು, ಮುತ್ತ ಒಡೆದರೆ ಹೋಯಿತು ಎಂಬ ಮಾತಿದೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅವರು ಆಡುವ ಮಾತಿನಿಂದಲೇ ತಿಳಿಯಬಹುದು. ಇಂತಹ ಮಾತಿಗೆ ಯಾರು ಅಧಿಪತಿ, ಯಾವ ಗ್ರಹ ಮಾತಿನ ನಿಯಂತ್ರಕ ಎಂದು ತಿಳಿಯೋಣ.


ಮಾತಿಗೆ ಶುಭ ಗ್ರಹಗಳಾದ ಚಂದ್ರ, ಗುರು ಮತ್ತು ಶುಕ್ರ ಗ್ರಹಗಳು ಕಾರಣ. ಜಾತಕ ಕುಂಡಲಿಯಲ್ಲಿ ಲಗ್ನದಿಂದ ಎರಡನೇ ಮನೆ ಮಾತಿಗೆ ಅಧಿಪತಿ. ಎರಡನೇ ಮನೆಯಲ್ಲಿ ಯಾವ್ಯಾವ ಗ್ರಹಗಳು ಇದ್ದರೆ ಮಾತು ಹೇಗಿರುತ್ತವೆ ಎಂದು ನೋಡೋಣ.

ಎರಡನೇ ಮನೆಯಲ್ಲಿ ಕೇತು ಅಥವಾ ರವಿ
ಎರಡನೇ ಮನೆಯಲ್ಲಿ ಕೇತು ಅಥವಾ ರವಿ ಇದ್ದು, ಅದಕ್ಕೆ ಕುಜ ಗ್ರಹದ ದೃಷ್ಟಿಯಿದ್ದರೆ ಅಂಥವರಿಗೆ ಮಾತಿನಲ್ಲಿ ತೊಂದರೆ ಇರುತ್ತದೆ. ಅಂದರೆ ತೊದಲು ಮಾತು, ಅಸ್ಪಷ್ಟ ಮಾತನಾಡುವ ಸಮಸ್ಯೆ ಇರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ