ಶ್ರಾವಣ ಮಾಸದ ವಿಶೇಷತೆಗಳೇನು?

ಸೋಮವಾರ, 16 ಆಗಸ್ಟ್ 2021 (09:06 IST)
ಬೆಂಗಳೂರು: ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು ಬಂತೆಂದೇ ಅರ್ಥ. ವಿಷ್ಣುವಿನ ನಕ್ಷತ್ರವಾದ ಶ್ರವಣ ನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣ ಮಾಸವೆಂದು ಹೆಸರು.


ದೇವಾಸುರರು ಸಮುದ್ರಮಥನ ಮಾಡಿದ್ದು, ಲಕ್ಷ್ಮೀ ದೇವಿ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕವನ್ನು ಸಮೃದ್ಧಗೊಳಿಸಿದ್ದು ಇದೇ ಮಾಸ ಎಂಬ ನಂಬಿಕೆಯಿದೆ. ಹೀಗಾಗಿ ಈ ಮಾಸ ಅತ್ಯಂತ ಸಮೃದ್ಧಿಕಾರಕ ಎನ್ನಲಾಗುತ್ತದೆ.

ವರ್ಷ ಋತುವಿನಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಅಸ್ವಸ್ಥೆಯನ್ನು ದೂರವಿರಿಸುವ ಸಲುವಾಗಿ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ ಮುಂತಾದ ವ್ರತ ಮಾಡಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ