ಗೃಹಿಣಿಯರು ಪಾಕೆಟ್ ಮನಿ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್!

ಶನಿವಾರ, 27 ಏಪ್ರಿಲ್ 2019 (06:55 IST)
ಬೆಂಗಳೂರು: ಉದ್ಯೋಗಕ್ಕೆ ಹೋಗದ ಗೃಹಿಣಿಯರಿಗೆ ಕೈಯಲ್ಲಿ ಕಾಸು ಕೂಡಿಡುವ ಚಿಂತೆ ಇದ್ದೇ ಇರುತ್ತದೆ. ಗಂಡ ಕೊಡುವ ಹಣ ಎಷ್ಟೆಂದರೂ ತನ್ನದು ಎಂದು ಆಗದು. ಹಾಗಾಗಿ ತನ್ನ ಪಾಕೆಟ್ ಮನಿ ತಾನೇ ಸಂಪಾದಿಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಟಿಪ್ಸ್


ಹಾಲು, ಹಳೇ ಪೇಪರ್
ಹಾಲಿನ ಪ್ಯಾಕೆಟ್, ಹಳೇ ಪೇಪರ್, ಹಳೇ ಪ್ಲಾಸ್ಟಿಕ್ ವಸ್ತುಗಳು ಇತ್ಯಾದಿಗಳನ್ನು ವೃಥಾ ಹಾಳು ಮಾಡಬೇಡಿ. ಎಲ್ಲವನ್ನೂ ಸಂಗ್ರಹಿಸಿಟ್ಟುಕೊಂಡು ಕೊನೆಗೆ ಗುಜುರಿ ಮಾರುವ ಅಂಗಡಿಗೆ ಹಾಕಿದರೆ ತಿಂಗಳಿಗೆ ಏನಿಲ್ಲವೆಂದರೂ ಸಣ್ಣ ಪುಟ್ಟ ಆಸೆ ಪೂರೈಸಿಕೊಳ್ಳಬಹುದು.

ಟ್ಯೂಷನ್ ಕೊಡಿ
ಹೇಗಿದ್ದರೂ ನಿಮ್ಮ ಮಕ್ಕಳನ್ನು ತಿದ್ದಿ ನಿಮಗೆ ಅಭ್ಯಾಸವಾಗಿರುತ್ತದೆ. ಹೀಗಾಗಿ ಅಕ್ಕ ಪಕ್ಕದ ಮಕ್ಕಳಿಗೆ ಟ್ಯೂಷನ್ ಹೇಳಿಕೊಟ್ಟರೆ ನಿಮ್ಮ ಮನಸ್ಸಿಗೂ ಖುಷಿ, ಪಾಕೆಟೂ ತುಂಬುವುದು.

ಟ್ಯಾರೇಸ್ ಕೃಷಿ
ಟ್ಯಾರೇಸ್ ಕೃಷಿ ಮಾಡಿದರೆ ಏನು ಉಪಯೋಗ ಎಂದು ನೀವು ಅಚ್ಚರಿಪಡಬಹುದು. ಆದರೆ ಟ್ಯಾರೇಸ್ ನಲ್ಲೇ ಮಾಡಬಹುದಾದ ಹೂವು, ತರಕಾರಿ ಕೃಷಿಯಿಂದ ಅಕ್ಕಪಕ್ಕದ ಸಣ್ಣ ಪುಟ್ಟ ಅಂಗಡಿ ಅಥವಾ ಮನೆಯವರಿಗೆ ನಿಮಗೆ ಸರಿಹೊಂದಬಹುದಾದ ಧಾರಣೆಯಲ್ಲಿ ಮಾರಿದರೆ ಸಣ್ಣ ಆದಾಯ ಕೈ ಸೇರುತ್ತದೆ. ಜತೆಗೆ ನೀವು ತರಕಾರಿಗಾಗಿ ತೆರುವ ವೆಚ್ಚವೂ ಉಳಿತಾಯವಾಗುವುದು.

ಟೈಲರಿಂಗ್
ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪುಟ್ಟ ಟೈಲರಿಂಗ್ ಕೆಲಸ ಮಾಡುವ ಟೈಲರ್ ಗಳೇ ಸಿಗಲ್ಲ. ಹೀಗಾಗಿ ಹೆಚ್ಚು ಟೈಲರಿಂಗ್ ಜ್ಞಾನವಿಲ್ಲದಿದ್ದರೂ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡಲು ಬಂದರೂ ಸಾಕು. ನಿಮ್ಮ ಖರ್ಚಿಗೆ ಸಾಕಾಗುವಷ್ಟು ಹಣ ಸಂಪಾದನೆ ಮಾಡಬಹುದು.

ಕಂಪ್ಯೂಟರ್ ಜ್ಞಾನವಿದ್ದರೆ
ಗಂಡ-ಮಕ್ಕಳು ಆಫೀಸು, ಶಾಲೆ ಎಂದು ಹೋದ ಮೇಲೆ ಕೆಲ ಹೊತ್ತು ಬಿಡುವು ಸಿಗುತ್ತದೆ ಎಂದಾದರೆ, ನಿಮಗೆ ಕಂಪ್ಯೂಟರ್ ಜ್ಞಾನವಿದ್ದರೆ ಮನೆಯಲ್ಲೇ ಕುಳಿತು ಆನ್ ಲೈನ್ ಉದ್ಯೋಗ ಮಾಡಬಹುದು. ಭಾಷಾಂತರ, ಡೇಟಾ ಎಂಟ್ರಿ, ಕಂಟೆಂಟ್ ರೈಟಿಂಗ್ ಇಂತಹ ಅನೇಕ ಆನ್ ಲೈನ್ ಉದ್ಯೋಗಗಳು ಇಂದು ಲಭ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ