ಪತಿಗೆ ನನ್ನ ತೃಪ್ತಿಪಡಿಸುವುದಕ್ಕಿಂತ ಅಶ್ಲೀಲ ವಿಡಿಯೋ ನೋಡುವ ಚಟ ಏನು ಮಾಡಲಿ?

ಶನಿವಾರ, 30 ಮಾರ್ಚ್ 2019 (16:36 IST)
ಪ್ರಶ್ನೆ: ನಾವು ವಿವಾಹವಾಗಿ ಒಂಬತ್ತು ವರ್ಷಗಳು ಕಳೆದಿವೆ. ನನ್ನ ಪತಿ ತುಂಬಾ ಒಳ್ಳೆಯವರು ಗೆಳೆಯನಂತೆ ನಾವಿಬ್ಬರು ಕಷ್ಟ ಸುಖಗಳನ್ನು ಶೇರ್ ಮಾಡ್ತೇವೆ. ಆದರೆ ಒಂದು ವಿಷಯ ಮಾತ್ರ ನನಗೆ ಅರ್ಥವಾಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಒಂದು ಬಾರಿಯೂ ಲೈಂಗಿಕ ಕ್ರಿಯೆ ನಡೆಸಿಲ್ಲ. ಪತಿಗೆ ಕೇಳಿದರೆ ನಿನ್ನಲ್ಲಿ ಯಾವುದೇ ಆಕರ್ಷಣೆ ಉಳಿದಿಲ್ಲ ಎನ್ನುತ್ತಾರೆ. ದುರದೃಷ್ಟಕರವೆಂದರೆ ಅಶ್ಲೀಲ ಚಿತ್ರಗಳನ್ನು ನೋಡಿ ತೃಪ್ತಿ ಪಟ್ಟುಕೊಳ್ತಾರೆ. ಇದರಿಂದ ನನಗೆ ಜೀವನೇ ಬೇಸರವಾಗಿದೆ. ಮತ್ತೆ ಸಾಮಾನ್ಯದಂತಾಗಲು ಏನು ಮಾಡಲಿ? 
ಉತ್ತರ: ನಿಮ್ಮ ಕಷ್ಟವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ನೀವಿಬ್ಬರು ಪರಸ್ಪರ ಅನ್ಯೋನ್ಯವಾಗಿರುವುದು ಸಂತೋಷದ ವಿಷಯ. ಪತಿಯ ವರ್ತನೆಯಿಂದ ನಿಮಗೆ ಬೇಸರವಾಗುವುದು ಸಾಮಾನ್ಯ. ನಿಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಬಿಟ್ಟು ಅಶ್ಲೀಲ ಚಿತ್ರಗಳನ್ನು ನೋಡಿ ಯಾಕೆ ತೃಪ್ತಿ ಪಡುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಕೆಲವು ಬಾರಿ ಪುರುಷರು ಪತ್ನಿಯೊಂದಿಗೆ ಸವಿಯುವುದು ಬಿಟ್ಟು ಸ್ವಯಂ ಸಂತೋಷ ಪಡಲು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಆದರೆ, ಸಂತೋಷಪಡಿ ಬೇರೆ ಮಹಿಳೆಯರತ್ತ ನಿಮ್ಮ ಪತಿ ಆಕರ್ಷಿತರಾಗಿಲ್ಲ. ಒಂದು ಸುಂದರವಾದ ಸಂಜೆಯಲ್ಲಿ ನಿಮ್ಮ ಪತಿಯೊಂದಿಗೆ ಮನ ಬಿಚ್ಚಿ ಮಾತನಾಡಿ, ನಿಮ್ಮ ನೋವು ಹೇಳಿಕೊಳ್ಳಿ. ಪರಿಹಾರ ಕಾಣದಿದ್ದರೆ ಮಾನಸಿಕ ತಜ್ಞರನ್ನು ಭೇಟಿಯಾಗಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ