ಯುಗಾದಿ ದಿನ ಅಭ್ಯಂಜನ ಸ್ನಾನ ಮಾಡುವುದೇಕೆ?

ಶನಿವಾರ, 2 ಏಪ್ರಿಲ್ 2022 (10:41 IST)
ಬೆಂಗಳೂರು: ಇಂದು ಯುಗಾದಿ ಹಬ್ಬ. ಯುಗಾದಿ ದಿನ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿ ಬೇವು-ಬೆಲ್ಲ ತಿಂದು ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಹಾಗಿದ್ದರೆ ಅಭ್ಯಂಜನ ಸ್ನಾನದ ಮಹತ್ವವೇನು ಗೊತ್ತಾ?

ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ವಾತ, ಪಿತ್ತ, ಕಫ ಎಂಬಂತಹ ತ್ರಿವಿಧ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಚರ್ಮವೂ ಕಾಂತಿಯುತವಾಗುತ್ತದೆ.

ಶರೀರ ಪೂರ್ತಿ ಎಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಯಾಸ ದೂರವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗುತ್ತೇವೆ ಎಂಬುದು ನಮ್ಮ ಪೂರ್ವಜರಿಂದ ಬಂದ ನಂಬಿಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ