ನಾಡಿನೆಲ್ಲೆಡೆ ಹೊಸತಡುಕು ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ.ಸಿಲಿಕಾನ್ ಸಿಟಿಯ ಮಾರುಕಟ್ಟೆಗಳು ಕಾಲಿಡಲಾಗದ ಮಟ್ಟಿಗೆ ಗ್ರಾಹಕರಿಂದ ತುಂಬಿ ತುಳುಕ್ತಿದೆ. ಇದರ ಜೊತೆಗೆ ಹಣ್ಣು-ಹೂಗಳ ಬೆಲೆ ಗಗನಕ್ಕೇರಿದ್ರು ಕೂಡ ಗ್ರಾಹಕರೆಲ್ಲಾ ಹಬ್ಬದ ಶಾಪಿಂಗ್ ನಲ್ಲಿ ಬ್ಯುಸಿಯಾಗಿದ್ರುಬೇವು ಬೆಲ್ಲ ಸವಿಯುತ್ತಾ ಯುಗಾದಿ ಹಬ್ಬವನ್ನ ಆಚರಿಸುವುದಕ್ಕೆ ಬೆಂಗಳೂರು ಮಂದಿ ಸಜ್ಜಾಗಿದ್ದಾರೆ . ಹೀಗಾಗಿ ಹಬ್ಬ ಆಚರಿಸಲು ಇಂದು ಗ್ರಾಹಕರು ತಮ್ಮಗೆ ಬೇಕಾದ ವಸ್ತುಗಳನ್ನ ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ರು. ಕಳೆದ 2 ವರ್ಷದಿಂದ ಜನರಿಗೆ ಯುಗಾದಿ ಹಬ್ಬವನ್ನ ಆಚರಿಸಲಾಗಿದಿಲ್ಲ. ಆದ್ರೆ ಈಗ ಕೋವಿಡ್ ನಿರ್ಬಂಧಗಳು ಒಂದು ಕಡೆ ಸಡಿಲಿಕೆಯಾಗಿದೆ. ಮತ್ತೊಂದು ಕಡೆ ಜನಜೀವನ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆ ಜನರಿಂದ ತುಂಬಿತ್ತು. ಕಾಲಿಡಲಾಗದ ಮಟ್ಟಿಗೆ ಮಾರುಕಟ್ಟೆ ಫುಲ್ ರಾಷ್ ಆಗಿತ್ತು.ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟಂತೂ ಜೋರಾಗಿತ್ತು.ಇನ್ನು ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಮಾವಿನ ಎಲೆ, ಬೇವಿನ ಎಲೆ, ತುಳಸಿ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರು ಕೊಳ್ಳುವುದಕ್ಕೆ ಮುಗಿಬಿದ್ದಿದ್ರು.
ಇನ್ನು ಯಾವ್ಯಾವ ಹೂಗಳು ಎಷ್ಟು ಬೆಲೆ ಇದೆ ಅಂತಾ ನೋಡುವುದಾದ್ರೆ
ಕನಂಕಬರ 1 ಕೆಜಿ 600ರೂ 1 ಮಾರು 100 ರೂಪಾಯಿ