ಗ್ರಹಚಾರ ಫಲವೆಂದರೇನು? ಇದರ ಲೆಕ್ಕಾಚಾರ ಹೇಗೆ?

ಶುಕ್ರವಾರ, 3 ಮೇ 2019 (06:03 IST)
ಬೆಂಗಳೂರು: ಗ್ರಹ ಗೋಚರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು ಕೆಲವು ಗ್ರಹಗಳು ಕಡಿಮೆ ಕಾಲವನ್ನು ಇನ್ನು ಕೆಲವು ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ.

 
ಭೂ ಚಕ್ರವನ್ನು ಸುತ್ತಲು ಚಂದ್ರ ಒಂದು ತಿಂಗಳು, ಸೂರ್ಯ, ಬುಧ, ಶುಕ್ರ, ಕುಜರು ಒಂದು ವರ್ಷ, ಗುರು ಹನ್ನೆರಡು ವರ್ಷ, ರಾಹು, ಕೇತು ಹದಿನೆಂಟು ವರ್ಷಗಳನ್ನು, ಶನಿ ಮೂವತ್ತು ವರ್ಷಗಳನ್ನು ತೆಗೆದುಕೊಳ್ಳುತ್ತವೆ.

ಹೀಗೆ ನವಗ್ರಹಳು ಕುಂಡಲಿಯಲ್ಲಿ ಸುತ್ತುವಾಗ ಚಂದ್ರನಿರುವ ರಾಶಿಯಿಂದ ಗ್ರಹ ಇರುವ ರಾಶಿಯವರೆಗೆ ಎಣಿಸಿದರೆ ಬರುವ ಸಂಖ್ಯೆಗನುಗುಣವಾಗಿ ಗ್ರಹದ ಫಲ ತಾತ್ಕಾಲಿಕವಾಗಿ ಸಿಗುತ್ತದೆ.

ಗ್ರಹಗಳೆಲ್ಲಾ ಅತ್ಯಂತ ಮಂದವಾಗಿ ಸಂಚರಿಸುವ ಶನಿಗ್ರಹದ ಗೋಚಾರ ಹೆಚ್ಚು ಅನುಭವಕ್ಕೆ ಬರುತ್ತದೆ. ಶನಿ ಮನುಷ್ಯನ ಜನ್ಮ ರಾಶಿಯಿಂದ 12 ನೇ ರಾಶಿಗೆ ಬಂದಾಗ ಏಳು ರಾಷ್ಟ್ರ ಶನಿ ಕಾಟ ಅಥವಾ ಸಾಡೆಸಾಥ್ ಪ್ರಾರಂಭವಾಗುತ್ತದೆ.

ಶನಿಯು ಮೇಲ್ಕಂಡ 12 ನೇ ರಾಶಿ, ಜನ್ಮ ರಾಶಿ, ಮತ್ತು ಜನ್ಮ ರಾಶಿಗೆ ಎರಡನೆಯ ರಾಶಿಗಳಲ್ಲಿ ಇರುವ ಒಟ್ಟು ಕಾಲ ಅಥವಾ ಏಳೂವರೆ ವರ್ಷ ಕಾಲ ಮನುಷ್ಯನಿಗೆ ಕಷ್ಟದಾಯಕವಾಗಿರುತ್ತದೆ. ಈ ಏಳು ರಾಷ್ಟ್ರ ಶನಿ ಕಾಟದಲ್ಲಿನ ಮೊದಲಿನ ಎರಡೂವರೆ ವರ್ಷಗಳು ಅನೇಕರಿಗೆ ಕಷ್ಟದಾಯಕವಾಗಿರುವುದು. ಆದ್ದರಿಂದ ಈ ಶನಿ ಕಾಟದ ಕಾಲದಲ್ಲಿ ಜಾತಕನಿಗೆ ಗುರುಬಲ ಇದ್ದಾಗ ಕಾರ್ಯ ಸಿದ್ಧಿ ಕುಟುಂಬದಲ್ಲಿ ವಿವಾಹಾದಿ ಶುಭ ಕೆಲಸಗಳು ನಡೆಯುತ್ತದೆ.

ಪಾಪ ಗ್ರಹಗಳಾದ ಶನಿ ರವಿ, ರಾಹು, ಕೇತು, ಜನ್ಮ ರಾಶಿಯಿಂದ ತಮ್ಮ ಗೋಚಾರದಲ್ಲಿ 3-6-11 ನೆಯ ಸ್ಥಾನಕ್ಕೆ ಬಂದಾಗ ಶುಭ ಫಲ ಕೊಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ