ಬೆಂಗಳೂರು: ಮದುವೆಗೂ ಮೊದಲು ಈಗ ಗಂಡು-ಹೆಣ್ಣಿನ ನಡುವೆ ತಮ್ಮ ಮುಂದಿನ ಲೈಂಗಿಕ ಜೀವನ ಹೇಗಿರಬೇಕು, ಮಗುವಿನ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ ಇಂತಹ ಜೋಡಿಗಳು ತಮಗೆ ಯಾವ ಗರ್ಭನಿರೋಧಕ ಸೂಕ್ತ ಮತ್ತು ಅದಕ್ಕೆ ತಕ್ಕ ಸಿದ್ಧತೆ ಮಾಡುವುದು ಮುಖ್ಯ.
ಜಾಹೀರಾತು ನೋಡಿ, ಸ್ನೇಹಿತರನ್ನು ಕೇಳಿ ಯಾವುದೋ ಗರ್ಭನಿರೋಧಕವನ್ನು ಅಳವಡಿಸುವ ಬದಲು ಇಬ್ಬರೂ ಮುಕ್ತವಾಗಿ ಚರ್ಚಿಸಿ, ತಜ್ಞ ವೈದ್ಯರೊಡನೆ ಸಮಾಲೋಚಿಸಿ ತಮಗೆ ತಕ್ಕುದಾದ ಗರ್ಭನಿರೋಧಕ ಬಳಸುವುದು ಒಳ್ಳೆಯದು. ಯಾಕೆಂದರೆ ಒಮ್ಮೆ ಗರ್ಭಿಣಿಯಾದ ಮೇಲೆ ನಮಗೆ ಈಗ ಮಗು ಬೇಡವೆಂದು ಪದೇ ಪದೇ ಗರ್ಭಪಾತ ಮಾಡಿಸಿಕೊಳ‍್ಳುವುದು ಖಂಡಿತಾ ಒಳ್ಳೆಯದಲ್ಲ.