ರೋಹಿಣಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?
ಶನಿವಾರ, 2 ಮಾರ್ಚ್ 2019 (09:13 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
ಕೃತ್ತಿಕಾ ನಕ್ಷತ್ರದ ನಂತರ ಬರುವುದು ರೋಹಿಣಿ ನಕ್ಷತ್ರ. ಭಗವಾನ್ ಶ್ರೀಕೃಷ್ಣನ ಜನ್ಮ ನಕ್ಷತ್ರವೂ ರೋಹಿಣಿಯೇ. ಹಾಗಾಗಿ ಇದು ಶ್ರೇಷ್ಠ ನಕ್ಷತ್ರವೇ ಸರಿ.
ಈ ನಕ್ಷತ್ರದವರು ಆರಾಧಿಸಬೇಕಾದ ದೇವರೆಂದರೆ ಭಗವಾನ್ ಬ್ರಹ್ಮ. ಸಾಮಾನ್ಯವಾಗಿ ಬ್ರಹ್ಮನಿಗೆ ಮೂರ್ತಿ ಪೂಜೆಯಿಲ್ಲ. ಆದರೆ ರೋಹಿಣಿ ನಕ್ಷತ್ರದಂದು ಬ್ರಹ್ಮನ ಸ್ಮರಣೆ, ಧ್ಯಾನ ಮಾಡಿದರೆ ಈ ನಕ್ಷತ್ರದವರಿಗೆ ಜೀವನದಲ್ಲಿ ಅಂದುಕೊಂಡಿದ್ದ ಕನಸು, ಆಸೆ ನೆರವೇರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ