ಬೆಂಗಳೂರು: ಮಕ್ಕಳು ಹುಟ್ಟುವಾಗಲೇ ಒಳ್ಳೆಯ ನಕ್ಷತ್ರ, ಶುಭ ಗಳಿಗೆಯಲ್ಲಿ ಹುಟ್ಟಿದರೆ ಮುಂದೆ ಅವರ ಜೀವನವೂ ಚೆನ್ನಾಗಿರುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಿದ್ದರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಶುಭ ಎಂದು ನೋಡೋಣ.
ಉತ್ತರಾಭದ್ರ, ಪುಷ್ಯ, ಪುನರ್ವಸು ನಕ್ಷತ್ರಗಳು ನಿರುಪದ್ರವಿ ನಕ್ಷತ್ರಗಳು ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸಾಧು ಸ್ವಭಾವದವರಾಗಿರುತ್ತಾರೆ. ಕೃತ್ತಿಕಾ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದರೆ ಮಕ್ಕಳು ಮುಂದೆ ಬುದ್ಧಿವಂತರಾಗಿ, ಉತ್ತಮ ಸ್ಥಾನ ಮಾನ ಗಳಿಸುತ್ತಾರೆ. ಪೂರ್ವ ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಂದ ಕುಟುಂಬದವರಿಗೆ ಶುಭವಾಗುತ್ತದೆ. ಉತ್ತರ ಪಾಲ್ಗುಣಿ ನಕ್ಷತ್ರದವರಿಂದ ಇತರರಿಗೆ ಪರೋಕ್ಷವಾಗಿ ಉಪಕಾರವಾಗುತ್ತದೆ. ಹಸ್ತ ನಕ್ಷತ್ರದವರು ಯಾರನ್ನೂ ಆಶ್ರಯಿಸದೇ ಬೆಳೆಯುತ್ತಾರೆ ಮತ್ತು ವಿಶಾಖ ನಕ್ಷತ್ರದವರು ಅತೀವ ಜ್ಞಾನಿಗಳಾಗುತ್ತಾರೆ.