ಬೆಂಗಳೂರು: ದೀಪಾವಳಿ ದಿನ ಎಣ್ಣೆ ಸ್ನಾನ ಮಾಡುವ ಪದ್ಧತಿಯನ್ನು ನಾವೆಲ್ಲರೂ ಆಚರಿಸಿಕೊಂಡು ಬರುತ್ತಿದ್ದೇವೆ. ಅಷ್ಟಕ್ಕೂ ಎಣ್ಣೆ ಸ್ನಾನದ ಮಹತ್ವವೇನು ಗೊತ್ತಾ?
ಎಣ್ಣೆ ಸ್ನಾನ ಕೇವಲ ನಮ್ಮ ದೇಹದಲ್ಲಿರುವ ಕೊಳೆ ನಾಶ ಮಾಡಿ, ಗಟ್ಟಿಮುಟ್ಟಾಗಿಸುವುದು ಮಾತ್ರವಲ್ಲ. ಎಣ್ಣೆ ಸ್ನಾನವೆಂದರೆ ನಮ್ಮಲ್ಲಿರುವ ಅಹಂಕಾರ, ನಕಾರಾತ್ಮಕ ಅಂಶಗಳು, ಮದ-ಮತ್ಸರಗಳನ್ನು ತೊಳೆದುಕೊಳ್ಳುವುದು ಎಂಬ ಅರ್ಥವನ್ನೂ ಹೊಂದಿದೆ. ಹೀಗಾಗಿ ಕೇವಲ ಮಕ್ಕಳು ಮಾತ್ರವಲ್ಲ, ಎಲ್ಲಾ ವಯಸ್ಸಿನವರೂ ಈ ದಿನ ಎಣ್ಣೆ ಸ್ನಾನ ಮಾಡುವುದು ಉತ್ತಮ.