ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಶುಕ್ರವಾರ, 23 ಏಪ್ರಿಲ್ 2021 (06:38 IST)
ಬೆಂಗಳೂರು : ಕಾಫಿ ಇಲ್ಲದೆ ದಿನವನ್ನು ಆರಂಭಿಸಲು ಸಾಧ್ಯವಿಲ್ಲ. ಇದನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗೇ ಚರ್ಮದ ಆರೈಕೆಯಲ್ಲಿ ಕಾಫಿಯನ್ನು ಬಳಸಿದರೆ ಚರ್ಮದ ಕಾಂತಿ ಹೆಚ್ಚಿಸಬಹುದು. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಹಾಗಾಗಿ ಚರ್ಮದ ಕಾಂತಿ ಹೆಚ್ಚಿಸಲು ಕಾಫಿಯಿಂದ ಫೇಸ್ ಪ್ಯಾಕ್ ತಯಾರಿಸಿ.

*ಕಾಫಿ ಪುಡಿಗೆ ಆಲಿವ್ ಆಯಿಲ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ನೈಸರ್ಗಿಕವಾಗಿ ಚರ್ಮವನ್ನು ಪೋಷಿಸುತ್ತದೆ. ಹಾಗೇ ಆಲಿವ್ ಆಯಿಲ್ ಚರ್ಮವನ್ನು ನೈಸರ್ಗಿಕವಾಗಿ ಮಾಯಿಶ್ಚರೈಸ್ ಮಾಡುತ್ತದೆ. ಮತ್ತು ಮೃದುಗೊಳಿಸುತ್ತದೆ.

*1 ಚಮಚ ಕಾಫಿ, ಅರಶಿನ ಮತ್ತು ಮೊಸರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ. ಇದು ಸೂರ್ಯನ ಕಿರಣಗಳಿಂದಾಗುವ ಟ್ಯಾನಿಂಗ್ ಅನ್ನು ನಿವಾರಿಸುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ