ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಗುರುವಾರ, 22 ಏಪ್ರಿಲ್ 2021 (06:29 IST)
ಬೆಂಗಳೂರು : ಎಣ್ಣೆಯುಕ್ತ ಚರ್ಮದ ಮೇಲೆ ಧೂಳು, ಕೊಳೆಗಳು ಕುಳಿತುಕೊಂಡಾಗ ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಇವುಗಳನ್ನು ತೆಗೆದು ಹಾಕಲು ಈ ಮನೆಮದ್ದನ್ನು ಬಳಸಿ.
ಬ್ಲ್ಯಾಕ್ ಹೆಡ್ಸ್ ಗಳನ್ನು ಹೋಗಲಾಡಿಸಲು 2 ಕ್ಯಾಪ್ಸುಲ್ ಇದ್ದಿಲು, ½ ಚಮಚ ಬೆಂಟೋನೈಟ್ ಜೇಡಿ ಮಣ‍್ಣು ಮತ್ತು 1 ಚಮಚ ನೀರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ವಾಶ್ ಮಾಡಿ. ಇದನ್ನು 15 ದಿನಗಳಿಗೊಮ್ಮೆ ಮಾಡಿ.
*ವೈಟ್ ಹೆಡ್ಸ್ ಹೋಗಲಾಡಿಸಲು 2 ಚಮಚ ಕಿತ್ತಳೆ ಸಿಪ್ಪೆ ಪುಡಿ, 2 ಚಮಚ ಅಕ್ಕಿ ಪುಡಿ, 2 ಚಮಚ ಒಣ ಬಟಾಣಿ ಪುಡಿ ಇವೆಲ್ಲವನ್ನು ಸೇರಿಸಿ ರೋಸ್ ವಾಟರ್ ನೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಒಂಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ.