ಬೆಂಗಳೂರು: ನಾವು ಮಾಡುವ ಕರ್ಮಗಳಲ್ಲಿ ಲೋಪಗಳಿದ್ದರೆ ಅದರ ಫಲ ನಮಗೆ ಸಿಗದು. ಹಾಗೆಯೇ ಪೂಜಾ ವಿಧಿ ವಿಧಾನಗಳಲ್ಲಿ ಕೂಡಾ.
ಪುರೋಹಿತರಿಗೆ ಹಣಕೊಟ್ಟು ಎಲ್ಲವೂ ಸಿದ್ಧವಾದ ಮೇಲೆ ಹೋಮದ ಮುಂದೆ ಕುಳಿತು ಅವರು ಹೇಳಿದ್ದಷ್ಟನ್ನು ಯಾಂತ್ರಿಕವಾಗಿ ಮಾಡುತ್ತಾ, ಮಧ್ಯೆ ಮೊಬೈಲ್ ನೋಡುವುದು, ಯಾರಲ್ಲೋ ಹರಟುವುದು ಮಾಡುತ್ತಾ ಗಮನ, ಭಕ್ತಿಯೇ ಇಲ್ಲದೇ ಹೋಮ ಮಾಡುವುದರಿಂದ ಫಲ ಸಿಗದು.
ಸರಿಯಾದ ದಿನ ನೋಡಿ ಕರ್ಮಾಧ್ಯಕ್ಷನಾದ ಶ್ರೀಹರಿಯನ್ನು ಧ್ಯಾನ ಮಾಡಿ ಪುರೋಹಿತರು ಹೇಳುವ ಮಂತ್ರಗಳ ಬಗ್ಗೆ ಗಮನಕೊಟ್ಟು, ನೆಲದ ಮೇಲೆ ಕೂತು ಹೋಮಕ್ಕೆ ಬೇಕಾದ ಪೂಜಾ ಸಾಹಿತ್ಯ, ದ್ರವ್ಯಾದಿಗಳನ್ನು ನಾವೇ ತಂದು ಹೋಮ ಮಾಡಿದರೆ ಅದರ ಫಲ ಸಿಗುವುದು.