ನಿಮ್ಮ ಹೆಸರಿನಲ್ಲಿರುವ ಈ ಆಂಗ್ಲ ಅಕ್ಷರಗಳಿಂದ ನೀವು ಎಂಥವರು ತಿಳಿಯಬಹುದು!

ಮಂಗಳವಾರ, 8 ಜನವರಿ 2019 (09:18 IST)
ಬೆಂಗಳೂರು: ನಾಮಕರಣ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಮುಖ್ಯ ಜೀವನದ ಘಟ್ಟ. ಹೆಸರು ಎನ್ನುವುದು ನಮ್ಮ ಪೋಷಕರಿಂದ ನಮಗೆ ಸಿಗುವ ಉಡುಗೊರೆ. ನಿಮ್ಮ ಹೆಸರಿನಲ್ಲಿರುವ ಕೆಲವು ಅಕ್ಷರಶಗಳಿಂದ ನಿಮ್ಮ ಭವಿಷ್ಯ ತಿಳಿಯಬಹುದು ಎಂದು ನಿಮಗೆ ಗೊತ್ತಾ?


ಇಂಗ್ಲಿಷ್ ವರ್ಣಮಾಲೆಯ ಯಾವ ಅಕ್ಷರಶಗಳಿಂದ ನಿಮ್ಮ ಹೆಸರು ಆರಂಭವಾಗುತ್ತದೋ ಅದಕ್ಕೆ ಅನುಸಾರವಾಗಿ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿಯಬಹುದು.

ಲೆಟರ್ ಡಿ, ಎಂ, ಟಿ
ಈ ಮೂರು ಅಕ್ಷರಶಗಳಿಂದ ಪ್ರಾರಂಭವಾಗುವ ಹೆಸರು ನಿಮ್ಮದಾಗಿದ್ದರೆ ನೀವು ಕಠಿಣ ಪರಿಶ್ರಮಿಗಳಾಗಿರುತ್ತೀರಿ. ನಿಮ್ಮದೇ ಉದ್ದಿಮೆ ಪ್ರಾರಂಭ ಮಾಡುತ್ತೀರಿ.

ಲೆಟರ್ ಇ,ಎನ್,ಎಚ್ ಅಥವಾ ಎಕ್ಸ್
ಈ ಅಕ್ಷರಶಗಳಿಂದ ಆರಂಭವಾಗುವ ಹೆಸರು ನಿಮ್ಮದಾಗಿದ್ದರೆ ನಿಮ್ಮ ಜೀವನದಲ್ಲಿ ಹಣಕ್ಕೆ ಕೊರತೆಯಿರದು. ಆದರೆ ಖರ್ಚು ಕೂಡಾ ನಿಮ್ಮ ಹಿಡಿತದಲ್ಲಿರದು.

ಲೆಟರ್ ಯು,ವಿ, ಡಬ್ಲ್ಯು
ಈ ಹೆಸರಿನವರು ಜವಾಬ್ಧಾರಿ ಅರಿತವರಾಗಿರುತ್ತಾರೆ. ಜವಾಬ್ಧಾರಿಗಳಿಂದ, ಸಮಸ್ಯೆಗಳಿಂದ ನುಣುಚಿಕೊಂಡು ಓಡಿಹೋಗುವವರಲ್ಲ. ಯಾವಾಗಲೂ ಇನ್ನೊಬ್ಬರಿಗೆ ಸಹಾಯ ಮಾಡುವ ಉದಾರಿಗಳಾಗಿರುತ್ತಾರೆ.

ಲೆಟರ್ ಎ,ಐ,ಜೆ, ಕ್ಯು, ವೈ
ಈ ಅಕ್ಷರಶಗಳಿಂದ ಆರಂಭವಾಗುವ ಹೆಸರು ಅನೇಕರಿಗಿರುತ್ತದೆ. ಇವರು ಮಹತ್ವಾಕಾಂಕ್ಷಿಗಳು, ತಮ್ಮದೇ ಸ್ವೇಚ್ಛೆಯ ಬದುಕು ಸವೆಸಲು ಇಷ್ಟಪಡುವವರಾಗಿರುತ್ತಾರೆ.

ಲೆಟರ್ ಬಿ, ಆರ್, ಕೆ
ಈ ಅಕ್ಷರಶಗಳಿಂದ ಆರಂಭವಾಗುವ ಹೆಸರಿನವರು ತುಂಬಾ ಸೂಕ್ಷ್ಮಮತಿಗಳು, ಭಾವುಕರಾಗಿರುತ್ತಾರೆ. ಹಾಗೆಯೇ ಅಭದ್ರತೆ ಕಾಡುತ್ತಿರುತ್ತದೆ, ಅಷ್ಟೇ ಅಲ್ಲದೆ, ತಮ್ಮವರ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾರೆ.

ಲೆಟರ್ ಸಿ,ಜಿ,ಎಲ್,ಎಸ್
ಇವರು ತುಂಬಾ ಉತ್ತಮ ಗುಣನಡತೆಯವರಾಗಿರುತ್ತಾರೆ. ಹಾಗೆಯೇ ಇನ್ನೊಬ್ಬರ ಬಗ್ಗೆ ಕಾಳಜಿವಹಿಸುತ್ತಾರೆ. ಸಂಗೀತ,ಕಲಾಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೆ.

ಲೆಟರ್ ಒ, ಝೆಡ್
ಇವರಿಗೆ ಧಾರ್ಮಿಕ ನಂಬಿಕೆ ಜಾಸ್ತಿ. ಹಠವಾದಿಗಳು ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಿರುತ್ತಾರೆ.

ಲೆಟರ್ ಪಿ, ಎಫ್
ಜೀವನದಲ್ಲಿ ಅತ್ಯಂತ ಯಶಸ್ಸು ಗಳಿಸುತ್ತಾರೆ. ತಮಗೆ ಅನಿಸಿದ್ದನ್ನೇ ಮಾಡುವ ನೇರ ಸ್ವಭಾವದವರು. ಇದರಿಂದ ಇತರರಿಗೆ ನೋವಾದರೂ ಕೇರ್ ಮಾಡಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ