ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಒಂದೊಂದು ವಾರ ಒಬ್ಬೊಬ್ಬ ದೇವರಿಗೆ ವಿಶೇಷ ಎನ್ನಲಾಗುತ್ತದೆ. ಆಯಾ ವಾರ ಆಯಾ ದೇವರಿಗೆ ಸಂಬಂಧಿಸಿದ ಸ್ತೋತ್ರ, ಪ್ರಾರ್ಥನೆ ಮಾಡುವುದರಿಂದ ಬೇಡಿದ ವರ ಸಿಗುವುದು ಎನ್ನುವುದು ನಮ್ಮ ನಂಬಿಕೆ.
ಶುಕ್ರವಾರ ದೇವಿಯ ದಿನ. ಈ ದಿನ ಮಹಾಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂದೆಲ್ಲಾ ನಂಬಿಕೆಯಿದೆ. ಹೀಗಾಗಿ ಹಿಂದಿನ ದಿನವೇ ಪೂಜಾ ಸಾಮಗ್ರಿಗಳನ್ನು ತೊಳೆದು ಸಂಜೆ ವೇಳೆ ದೀಪ ಹಚ್ಚಿ ಭಕ್ತಿಯಿಂದ ಪೂಜೆ ಮಾಡಬೇಕು.
ಅಷ್ಟೇ ಅಲ್ಲದೆ, ಓಂ ಶ್ರೀ ದುರ್ಗಾಯ ನಮಃ’ ಎನ್ನುವ ಮಂತ್ರವನ್ನು ಜಪಿಸಬೇಕು. ದುರ್ಗೆಯನ್ನು ಆರಾಧಿಸಿದರೆ ಲಕ್ಷ್ಮಿ, ಕಾಳಿ, ಸರಸ್ವತಿ ಎಂಬ ಮೂರೂ ಶಕ್ತಿ ದೇವತೆಗಳನ್ನು ಆರಾಧಿಸಿದಂತೆ. ಇದರಿಂದ ನಮಗೆ ವಿದ್ಯೆ, ಬುದ್ಧಿ, ಐಶ್ವರ್ಯ, ಆರೋಗ್ಯ, ಎಲ್ಲವೂ ಲಭಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ