ದಿನಕ್ಕೊಂದು ರಾಶಿ: ಮೇಷ ರಾಶಿಯ ದಂಪತಿ ಜಗಳವಾಡುತ್ತಿದ್ದರೆ ಪರಿಹಾರವೇನು?

ಶನಿವಾರ, 29 ಡಿಸೆಂಬರ್ 2018 (09:10 IST)
ಬೆಂಗಳೂರು: ವಿವಾಹ ಜೀವನದ ಯಶಸ್ಸಿಗೆ ದಂಪತಿಯ ಜಾತಕ ಹೊಂದಾಣಿಕೆಯೂ ಕಾರಣವಾಗುತ್ತದೆ. ಇಂದಿನಿಂದ ಒಂದೊಂದು ರಾಶಿಯ ದಂಪತಿ ಕಲಹಕ್ಕೆ ಪರಿಹಾರವೇನೆಂದು ನೋಡುತ್ತಾ ಬರೋಣ.


ಮೇಷ ರಾಶಿ
ಮೇಷ ರಾಶಿಯನ್ನು ಹೊಂದಿರುವ ಗಂಡ-ಹೆಂಡತಿ ಪರಸ್ಪರ ಜಗಳವಾಡುತ್ತಿದ್ದರೆ, ಕಲಹವಿದ್ದರೆ, ಅದಕ್ಕೆ ಮುಖ್ಯ ಕಾರಣ ಶನಿ ಗ್ರಹದ ಪ್ರಭಾವ. ಹೀಗಾಗಿ ಈ ರಾಶಿಯವರು ಕಪ್ಪು ಧಾನ್ಯ, ಕಪ್ಪು ಬಟ್ಟೆ ಮತ್ತು ಕಪ್ಪು ಎಳ್ಳು ಕಾಳುಗಳನ್ನು ದಾನ ಮಾಡುವುದು ಉತ್ತಮ.

ಅದೂ ಶನಿಗೆ ಪ್ರಿಯವಾದ ಶನಿವಾರದಂದೇ ಈ ಧರ್ಮ ಕಾರ್ಯ ಕೈಗೊಂಡರೆ ಅದರ ಫಲ ನಿಮಗೆ ಸಿಕ್ಕಿ ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ವಿರಸ ದೂರವಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ