ದೇವರ ಮನೆ ಮನೆಯ ಯಾವ ದಿಕ್ಕಿಗೆ ಇದ್ದರೆ ಶ್ರೇಯಸ್ಸು?

ಶುಕ್ರವಾರ, 28 ಡಿಸೆಂಬರ್ 2018 (08:50 IST)
ಬೆಂಗಳೂರು: ದೇವರ ಮನೆ ಎನ್ನುವುದು ಮನೆಯಲ್ಲಿ ಸಕಾರಾತ್ಮಕ ಪ್ರಭಾವ ಉಂಟು ಮಾಡಲು ಅಗತ್ಯ. ಹಾಗಿದ್ದರೆ ಮನೆಯ ಯಾವ ದಿಕ್ಕಿನಲ್ಲಿ ದೇವರ ಮನೆ ಇರಬೇಕು ಗೊತ್ತಾ?


ವಾಸ್ತು ಪ್ರಕಾರ ದೇವರ ಮನೆ ಮನೆಯ ಈಶಾನ್ಯ ಭಾಗದಲ್ಲಿರಬೇಕು. ಕೆಲವೊಮ್ಮೆ ಮನೆಯ ವಿನ್ಯಾಸಕ್ಕೆ ಅನುಗುಣವಾಗಿ ಈಶಾನ್ಯ ಭಾಗದಲ್ಲಿ ದೇವರ ಮನೆ ಇಡಲು ಅನುಕೂಲವಿಲ್ಲದೇ ಹೋಗಬಹುದು. ಅಂತಹ ಸಂದರ್ಭದಲ್ಲಿ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಇಟ್ಟುಕೊಳ್ಳಬೇಕು.

ಅದೇ ರೀತಿ ದೇವರ ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ದೇವರ ಮೂರ್ತಿ, ಫೋಟೋ ಇರಬೇಕು. ಅದೂ ನೆಲದಲ್ಲಿ ಕೊಂಚ ಎತ್ತರದ ಸ್ಥಾನದಲ್ಲಿದ್ದರೆ ಶ್ರೇಯಸ್ಸು. ಪೂಜಾ ಮನೆಯ ಬಾಗಿಲು ಉತ್ತರ ಅಥವಾ ಪೂರ್ವ ಭಾಗದಲ್ಲಿದ್ದರೆ ಮನೆಗೆ ಶ್ರೇಯಸ್ಸು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ