ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಶ್ರೀರಾಮನನ್ನು ಸ್ಮರಿಸಿ ಹಾಡಿಹೊಗಳಿದ್ದಾರೆ.
ಶ್ರೀರಾಮನು ಎಲ್ಲೆಲ್ಲೂ ಇದ್ದಾನೆ. ಎಲ್ಲರ ಜೊತೆಗೆ ಇದ್ದಾನೆ ಎಂದಿರುವ ಅವರು, ಸಾಹಸ, ಸರಳತೆ ಹಾಗೂ ತ್ಯಾಗ, ಬದ್ಧತೆ ರಾಮನ ಅದ್ಭುತವಾದ ಗುಣಗಳಾಗಿವೆ ಎಂದು ಬಣ್ಣಿಸಿದ್ದಾರೆ.
ಇನ್ನು ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಯ ಭೂಮಿಪೂಜೆಯು ರಾಷ್ಟ್ರೀಯ ಏಕತೆಗೆ ಅವಕಾಶವಾಗಲಿ. ಜೈ ಶ್ರೀರಾಮ್ ಎಂದು ಹೇಳಿದ್ದಾರೆ.