ಕಣ್ಣಿನ ಆರೋಗ್ಯಕ್ಕಾಗಿ ಒಂದಷ್ಟು ...!

ಶುಕ್ರವಾರ, 31 ಜನವರಿ 2014 (10:42 IST)
PR
ಕಣ್ಣು ಸೌಂದರ್ಯ ಮತ್ತು ಆತ್ಮವಿಶ್ವಾಸಕ್ಕೆ ಪ್ರತೀಕ. ಇದು ಮುಖದ ಸೌಂದರ್ಯ ಆಕರ್ಷಣೀಯವಾಗಿ ಇರಬೇಕೆಂದರೆ ಕಣ್ಣಿನ ಹೊಳಪು ಸುಂದರವಾಗಿರ ಬೇಕು ಎನ್ನುತ್ತಾರೆ ತಜ್ಞರು. ಆದ್ದರಿಂದ ಸೌಂದರ್ಯ ವರ್ಣಿಸಬೇಕೆಂದರೆ ಕಣ್ಣಿನ ಬಗ್ಗೆ ಬರೆಯುವುದು- ಹೇಳುವುದು ಸಾಮಾನ್ಯ ಸಂಗತಿ. ಮುತ್ತಿನಂತಹ, ದುಂಬಿಯಂತಹ ಕಣ್ಣು ಎಂದೆಲ್ಲ ವರ್ಣಿಸುವುದು ಸಾಮಾನ್ಯ.

ಆದರೆ ಅನೇಕ ಕಾರಣಗಳಿಂದ ಕಣ್ಣುಗಳು ಕಳಾಹೀನವಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನೇ ಇದ್ದರೂ, ಮನಸ್ಸಿಗೆ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಕಣ್ಣಿನ ಕೆಳಗೆ ಉಬ್ಬಿದಂತೆ ಇದ್ದರೆ, ಕಪ್ಪು ವರ್ತುಲದಂತಹ ಸಮಸ್ಯೆಗಳು ಇದ್ದಾಗ ನಮ್ಮಲ್ಲಿ ಆತ್ಮವಿಶ್ವಾಸವೇ ದೂರವಾಗುತ್ತದೆ.
ಒಂದು ಕರವಸ್ತ್ರ ಇಲ್ಲವೇ ಚಿಕ್ಕ ಟವೆಲಿನಲ್ಲಿ ಐಸ್ ಕ್ಯೂಬ್ ಇಟ್ಟು ಸ್ವಲ್ಪ ಕಾಲ ಕಣ್ಣಿನ ಮೇಲಿಡಿ.

ಹಸಿಯಾದ ಆಲುಗಡ್ಡೆ ತುರಿದು ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ
ಸೌತೆ ಕಾಯಿಯನ್ನು ಸಹ ಇದೆ ರೀತಿ ಮಾಡ ಬಹುದಾಗಿದೆ.

ಸಮಯಕ್ಕೆ ಸರಿಯಾಗಿ ನಿದ್ರಿಸಿ, ಅನಗತ್ಯ ಸಂಗತಿಗಳ ಬಗ್ಗೆ ಚಿಂತೆ ಮಾಡದಿರಿ.

ದೇಹಕ್ಕೆ ವ್ಯಾಯಾಮ ಅತ್ಯಗತ್ಯ . ನಿರಂತವಾದ ವ್ಯಾಯಾಮ ಮಾಡುವುದರಿಂದ ಕಣ್ಣಿನ ಕೆಳಗೆ ಇರುವ ಉಬ್ಬು ದೂರ ಮಾಡ ಬಹುದಾಗಿದೆ. ಉಪ್ಪಿನ ಪ್ರಮಾಣದ ಬಳಕೆ ಮಿತಿಯಲ್ಲಿರಲಿ .

ಹೀಗೆ ಸಣ್ಣ ಪುಟ್ಟ ಸಂಗತಿಗಳು ನಿಮ್ಮ ಕಣ್ಣನ್ನು ಸುಂದರವಾಗಿಡುತ್ತದೆ

ವೆಬ್ದುನಿಯಾವನ್ನು ಓದಿ