ಗರ್ಭಿಣಿ ಧೂಮಪಾನ: ಹೆಣ್ಣುಮಕ್ಕಳ ಸಂತಾನಶಕ್ತಿಗೆ ಕುಂದು

ಶನಿವಾರ, 24 ನವೆಂಬರ್ 2007 (18:06 IST)
ಗರ್ಭಿಣಿ ಸ್ತ್ರೀಯರು ಧೂಮಪಾನದಲ್ಲಿ ನಿರತರಾಗುವುದರಿಂದ ಅವರಿಗೆ ಜನಿಸುವ ಹೆಣ್ಣುಮಕ್ಕಳ ಸಂತಾನ ಶಕ್ತಿ ಕುಂದುತ್ತದೆಂದು ಸಂಶೋಧನೆಯಿಂದ ಸಾಬೀತಾಗಿದೆ. ಕೆನಡಾದ ಟೊರೆಂಟೊ ವಿವಿಯ ಸಂಶೋಧಕರು ಇಲಿಯನ್ನು ಮಾದರಿಯಾಗಿ ಇಟ್ಟುಕೊಂಡು ಅಧ್ಯಯನ ನಡೆಸಿದರು.

ಸಂಶೋಧನೆಯ ಭಾಗವಾಗಿ ಸಿಗರೇಟ್ ಹೊಗೆಯಲ್ಲಿರುವ ಪರಿಸರ ವಿಷಕಾರಿ ವಸ್ತುವಾದ ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್‌ನ್ನು(ಪಿಎಎಚ್) ಹೆಣ್ಣು ಇಲಿಯ ಚರ್ಮದೊಳಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಯಿತು. ತಾಯಿ ಇಲಿ ಮಾಮೂಲಿ ಗಾತ್ರದ ಮರಿಗಳಿಗೆ ಜನ್ಮನೀಡಿದರೂ ಸಹ ಅದರ ಹೆಣ್ಣುಮರಿಗಳ ಸಂತಾನ ಶಕ್ತಿ ಕುಂದಿರುವುದು ಕಂಡುಬಂತು.

ಹೆಣ್ಣುಮರಿಗಳಲ್ಲಿ ಅಂಡಾಣು ಕೋಶಗಳ ಸಂಖ್ಯೆಯ ಮೇಲೆ ಪಿಎಎಚ್‌‍ಎಸ್‌ನಿಂದ ಉಂಟಾದ ದುಷ್ಪರಿಣಾಮಕ್ಕೆ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್(ಎಎಚ್‌ಆರ್) ಚುಚ್ಚುಮದ್ದು ನೀಡಿ ಅಪೋಪ್‌ಟೊಸಿಸ್ ಪ್ರಕ್ರಿಯೆ ಮೂಲಕ ಜೀವಕೋಶಗಳನ್ನು ಸಾಯಿಸುವ ಪ್ರೋಟೀನ್ ಉತ್ಪಾದನೆಯನ್ನು ನಿಯಂತ್ರಿಸಲಾಯಿತು.

ಮಾನವ ಜೀವಿಗಳ ಅಂಡಾಣು ಕೋಶಗಳಲ್ಲಿಯೂ ಪಿಎಎಚ್‌ಗಳು ಇದೇ ರೀತಿಯ ಪರಿಣಾಮ ಉಂಟುಮಾಡುವುದು ಕಂಡುಬಂತು ಎಂದು ಸಂಶೋಧಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ