ಚಳಿಗಾಲದಲ್ಲಿ ಚರ್ಮ ರಕ್ಷಣೆಗೆ ಇಲ್ಲಿದೆ ಮದ್ದು

ಶುಕ್ರವಾರ, 24 ಜನವರಿ 2014 (09:52 IST)
PR
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ತೊಂದರೆ ಅನುಭವಿಸುವುದು ದೇಹದ ಚರ್ಮ.ಮಾಗಿ ಕಾಲದ ಸಮಸ್ಯೆಯಿಂದ ಬಳಲುವ ಚರ್ಮ ಸುಕ್ಕುಗಡುತ್ತದೆ. ಅಲ್ಲದೆ ಕೈ ಕಾಲುಗಳ ಚರ್ಮ ಒಡೆದು ಬಿರುಕು ಬಿಡಲು ಆರಂಭ ಆಗುತ್ತದೆ. ಇದರಿಂದ ದೂರವಾಗಲು ಸರಿಯಾದ ವಿಧಾನವೆಂದರೆ ಸ್ನಾನ. ಅದು ಸ್ನಾನದಲ್ಲಿ ಆದಷ್ಟು ಉಗುರು ಬೆಚ್ಚಗಿರುವ ನೀರಿಗೆ ಆದ್ಯತೆ ನೀಡ ಬೇಕು. ಚಳಿಗಾಲಕ್ಕೆ ಸೂಕ್ತ ಅನ್ನಿಸುವ ಸೋಪುಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ ಅದನ್ನು ಬಳಸಿ.

ಸ್ನಾನದ ಬಳಿಕ ಒದ್ದೆ ಚರ್ಮಕ್ಕೆ ಮಾಯಿಶರೈಸರ್ ಲೇಪಿಸಿ. ಆ ರೀತಿ ಮಾಡುವುದರಿಂದ ಚರ್ಮದಲ್ಲಿ ಶುಷ್ಕತೆ ದೂರವಾಗುತ್ತದೆ. ಅನೇಕ ಬಾಡಿಲೋಶನ್ ಗಳು, ಎಣ್ಣೆಗಳು ಮಾರುಕಟ್ಟೆಯಲ್ಲಿ ದೊರಕುತ್ತದೆ.
ಇವುಗಳ ಬಳಕೆ ಮಾಡಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಿಕೊಳ್ಳಿ.

ಅಲ್ಲದೆ ಕಡಲೆ ಹಿಟ್ಟು ಮತ್ತು ಮೊಸರು ಬೆರೆತ ಫೆಸ್ ಪ್ಯಾಕ್ ಲೇಪಿಸಿ ಬೆಚ್ಚಗಿರುವ ನೀರಲ್ಲಿ ತೊಳೆಯಿರಿ.
ತಲೆಗೆ ಎಣ್ಣೆ ಹಚ್ಚಿ ಉಗುರು ಬೆಚ್ಚಗಿರುವ ನೀರಲ್ಲಿ ಅದನ್ನು ಸ್ವಚ್ಚಗೊಳಿಸಿ .

ವೆಬ್ದುನಿಯಾವನ್ನು ಓದಿ