ಚಳಿಯ ಹಾನಿಯಿಂದ ಚರ್ಮ ರಕ್ಷಿಸುವುದು ಹೀಗೆ !

ಗುರುವಾರ, 30 ಜನವರಿ 2014 (14:17 IST)
PR
ಚಳಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದರು, ಅದು ನಮ್ಮ ಚರ್ಮದ ಮೇಲೆ ತೋರುತ್ತಿರುವ ಪ್ರಭಾವ ಮಾತ್ರ ಕಡಿಮೆ ಆಗಿಲ್ಲ. ಶುಷ್ಕ ವಾತಾವರಣದಿಂದ ತೊಂದರೆ ಅನುಭವಿಸುತ್ತಿರುವ ಚರ್ಮಕ್ಕೆ ಕೆಲವೊಂದು ಉಪಚಾರಗಳನ್ನು ನಾವು ಈಗಾಗಲೇ ಹೇಳಿದ್ದೇವೆ. ಇಲ್ಲಿ ಇನ್ನು ಒಂದಷ್ಟಿದೆ.
ಚರ್ಮದ ತಾಜಾತನಕ್ಕಾಗಿ ತಪ್ಪದೆ ಹಾಲಿನ ಕೆನೆಯೊಂದಿಗೆ ಜೇನು ಮಿಶ್ರ ಮಾಡಿ ಕಟ್ಟು ಹಾಗು ಮುಖಕ್ಕೆ ಲೇಪಿಸಿ.. ಸ್ವಲ್ಪ ಸಮಯದ ಬಳಿಕ ತೊಳೆಯಿರಿ.

*ಕೊಬ್ಬರಿ ಎಣ್ಣೆಯಲ್ಲಿ ಕರ್ಜುರವನ್ನು ಸೇರಿಸಿ ಸ್ನಾನಕ್ಕೆ ಮೊದಲು ದೇಹಕ್ಕೆ ಲೇಪಿಸಿದರೆ ಚರ್ಮ ಮೃದುವಾಗಿ ಹೊಳಪನ್ನು ಪಡೆಯುತ್ತದೆ.

*ಹೊಳೆಯುವ ಚರ್ಮಕ್ಕಾಗಿ ಒಂದು ಚಮಚೆ ನಿಂಬೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಒಂದು ಟೇಬಲ್ ಸ್ಪೂನ್ ಹಾಲಿನ ಕೆನೆ ಬೆರಸಿ ಮಾಸ್ಕ್ ಹಾಕಿಕೊಂಡರೆ ಉತ್ತಮ ಫಲಿತಾಂಶ ಹೊಂದ ಬಹುದಾಗಿದೆ. ಆಧಾರವೂ ಒಡೆಯದೆ ಇರಲು ನಿಂಬೆ ರಸಕ್ಕೆ ಜೇನು ಗ್ಲಿಸರಿನ್ ಮಿಶ್ರ ಮಾಡಿ ಉಪಯೋಗಿಸಿ.

* ಮೊಸರು ಮತ್ತು ಹಾಲು ಪುಡಿಯನ್ನು ಬೆರಸಿ ಪ್ಯಾಕ್ ಹಾಕಿಕೊಳ್ಳಿ.

ವೆಬ್ದುನಿಯಾವನ್ನು ಓದಿ