ನಿಮಗೆ ಗೊತ್ತೇ ಮುಖ ತೊಳೆಯುವ ವಿಧಾನ !

ಶುಕ್ರವಾರ, 3 ಜನವರಿ 2014 (13:30 IST)
PR
ಸಾಮಾನ್ಯವಾಗಿ ಮುಖ ತೊಳೆಯುವ ಬಗ್ಗೆ ಅನೇಕ ಬಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ ಜನರು. ನಮ್ಮ ಮುಖದ ಚರ್ಮವನ್ನು ತಾಜವಾಗಿಡುವಲ್ಲಿ ಮುಖ ತೊಳೆಯುವ ಪ್ರಕ್ರಿಯೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದಿನಕ್ಕೆ ಎರಡು ಬಾರಿ ಮುಖವನ್ನು ತೊಳೆಯ ಬೇಕು ಎಂದು ಹೇಳುತ್ತಾರೆ ಸೌಂದರ್ಯ ತಜ್ಞರು.ಮುಖಕ್ಕೆ ಹಚ್ಚಿರುವ ಸೋಪ್ , ಇಲ್ಲವೇ ಫೆಸ್ ವಾಷನ್ನು ಸ್ವಲ್ಪ ನಿಮಿಷಗಳ ಕಾಲ ಹಾಗೆ ಇಟ್ಟು ಆ ಬಳಿಕ ತೊಳೆಯ ಬೇಕು. ಸೋಪು ಮುಖವೆಲ್ಲ ಹರಡುವಂತೆ ಹಚ್ಚಿ ಮೃದುವಾಗಿ ಉಜ್ಜ ಬೇಕು .

ಈ ರೀತಿ ದಿನಕ್ಕೆರಡು ಬಾರಿ ಮಾಡುವುದು ಅತ್ಯಗತ್ಯ. ಇದರಿಂದ ಚರ್ಮದಲ್ಲಿ ಸೇರಿರುವ ಕೊಳೆ, ಧೂಳು ದೂರವಾಗಿ ತ್ವಚೆ ಸ್ವಚ್ಛವಾಗಿ ಹೊಳಪನ್ನು ಪಡೆಯುತ್ತದೆ. ಕೆಲವರು ಅತಿಯಾದ ತಣ್ಣಗಿರುವ ನೀರನ್ನು ಇಲ್ಲವೇ ಅತಿ ಬಿಸಿ ನೀರನ್ನು ಮುಖ ತೊಳೆಯಲು ಬಳಸುತ್ತಾರೆ. ಆದರೆ ತ್ವಚೆಯ ರಕ್ಷಣೆಗೆ ಈ ಎರಡು ವಿಧಾನವು ತಪ್ಪು ಉಗುರು ಬೆಚ್ಚಗಿರುವ ಇಲ್ಲವೇ.. ಅಲ್ಪ ಮಟ್ಟಿಗೆ ತಣ್ಣಗಿರುವ ನೀರಿನ ಬಳಕೆ ಮಾಡಬೇಕು. ಅತಿ ಬಿಸಿ ನೀರು ಚರ್ಮದ ಎಣ್ಣೆ ಗ್ರಂಥಿಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಮುಖವನ್ನು ನೀರನ್ನು ಎರಚುತ್ತ ತೊಳೆದುಕೊಂಡರೆ ಹೆಚ್ಚು ಉತ್ತಮ ಫಲಿತಾಂಶ ಹೊಂದ ಬಹುದಾಗಿದೆ. ರಾತ್ರಿಯ ವೇಳೆಯಲ್ಲಿ ಮುಖಕ್ಕೆ ಹಚ್ಚಿರುವ ಮೇಕಪ್ ತೆಗೆಯಲು ಮುಖ ತೊಳೆಯುವ ವಿಧಾನ ಹೆಚ್ಚು ಸೂಕ್ತ.

ವೆಬ್ದುನಿಯಾವನ್ನು ಓದಿ