ಸಿಗರೇಟ್, ಕುಡಿತ ಎರಡರ ಮಿಶ್ರಣದಿಂದ ಹೃದಯಬೇನೆ

ಶನಿವಾರ, 24 ನವೆಂಬರ್ 2007 (18:07 IST)
ಸೆಕೆಂಡ್‌ಹ್ಯಾಂಡ್ ಧೂಮಪಾನ ಅಥವಾ ಪರೋಕ್ಷ ಧೂಮಪಾನವು ಹೃದಯಕ್ಕೆ ಹಾನಿಕರವೆಂದು ಗೊತ್ತಾಗಿರುವ ನಡುವೆ ಅದರ ಜತೆಗೆ ಕುಡಿತವೂ ಸೇರಿಕೊಂಡರೆ ಅದರಿಂದ ಹಾನಿ ಐದು ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಮಾಡಿದೆ.

ಬರ್ಮಿಂಗ್‌ಹ್ಯಾಮ್‌ನ ಅಲ್ಬಾಮಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಸಿಗರೇಟ್ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ ಎರಡರ ಮಿಶ್ರಣದಿಂದ ಹೃದಯ ಬೇನೆಯ ಪ್ರಮಾಣ ತೀವ್ರತರವಾಗುತ್ತದೆಂದು ತಿಳಿಸಿದೆ. ಸಿಗರೇಟ್ ಹೊಗೆ ಮತ್ತು ಆಲ್ಕೊಹಾಲ್ ಸೇವನೆಯಿಂದ ರಕ್ತನಾಳದಲ್ಲಿ ಗಡ್ಡೆಗಳ ಸಂಖ್ಯೆಯನ್ನು ವೃದ್ಧಿಗೊಳಿಸುತ್ತದೆ.ಅತಿಯಾದ ಧೂಮಪಾನಿಗಳಲ್ಲಿ ರಕ್ತನಾಳದ ಗಡ್ಡೆ ಸಾಮಾನ್ಯ ಸಮಸ್ಯೆಯಾಗಿದ್ದು, ಹೃದಯಬೇನೆ ಸಮೀಪಿಸುವುದರ ಮುಖ್ಯ ಲಕ್ಷಣವಾಗಿದೆ.

ಧೂಮದ ಗಾಳಿಯ ಸೇವನೆ ಮತ್ತು ಎಥಾನಲ್ ದ್ರವರೂಪದ ಆಹಾರವನ್ನು ಇಲಿಗಳಿಗೆ ನೀಡುವ ಮೂಲಕ ಸಂಶೋಧನೆ ಕೈಗೊಳ್ಳಲಾಯಿತು. ಧೂಮಪಾನ ಮತ್ತು ಎಥಾನಲ್ ಸೇವನೆ ಮಾಡಿದ ಇಲಿಗಳಲ್ಲಿ ಶುದ್ಧವಾದ ಗಾಳಿ ಮತ್ತು ಮಾಮೂಲಿ ಗಟ್ಟಿ ಆಹಾರ ಸೇವಿಸಿದ ಇಲಿಗಳಿಗಿಂತ 4.7 ಪಟ್ಟು ರಕ್ತನಾಳದ ಗಡ್ಡೆ ಕಾಣಿಸಿತೆಂದು ಸಂಶೋಧಕರು ಪತ್ತೆಹಚ್ಚಿದರು.

ವೆಬ್ದುನಿಯಾವನ್ನು ಓದಿ