ಹೊಳೆಯುವ ಚರ್ಮಕ್ಕಾಗಿ ಸರಳ ಉಪಾಯಗಳು

ಗುರುವಾರ, 2 ಜನವರಿ 2014 (13:17 IST)
PR
ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಚರ್ಮವನ್ನು ಸುಂದರವಾಗಿ ಹೊಳಪಿನಿಂದ ಕೂಡಿರ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ಖರ್ಚು ಮಾಡ ಬೇಕೇನೋ ಎನ್ನುವ ಆತಂಕವು ಸಹ ಅವರಲ್ಲಿ ಮನೆ ಮಾಡಿರುತ್ತದೆ. ಆದರೆ ನಿಮ್ಮ ಜೋಬಿಗೂ ಕತ್ತರಿಯ ಆಗದೆ ಮನೆಯಲ್ಲಿ ಸಿಗುವ ಪದಾರ್ಥಗಳ ಮೂಲಕ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳ ಬಹುದು . ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ನಿಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ನ್ನೀವು ಬಯಸಿದ ಸೌಂದರ್ಯ ನಿಮ್ಮದಾಗುತ್ತದೆ.

* ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರಾದರು ಸೇವಿಸಲೇ ಬೇಕು. ಅನೇಕ ಬಾರಿ ನೀರೆಂದರೆ ಕೇವಲ ಅದನ್ನೇ ಸೇವಿಸುತ್ತಾ ಕೂರದೆ ಬದಲಿ ವ್ಯವಸ್ಥೆಗಳಾದ ಹಣ್ಣಿನ ರಸ, ಹಾಲು, ಮಜ್ಜಿಗೆಯಂತಹ ದ್ರವ ಪದಾರ್ಥಗಳನ್ನು ಸೇವಿಸಲು ಮರೆಯ ಬಾರದು.

* ಕರಿ ದ್ರಾಕ್ಷಿ , ದಾಳಿಂಬೆ, ಕಲ್ಲಂಗಡಿ ಹಣ್ಣನ್ನು ತಪ್ಪದೆ ಸೇವಿಸಿ, ಇದು ಚರ್ಮದ ಹೊಳಪನ್ನು ಕಾಪಾಡುತ್ತದೆ.

* ಹೊರಗೆ ಹೋಗುವುದಕ್ಕೆ 30 ನಿಮಿಷಗಳ ಮುನ್ನವೇ ಸನ್ಸ್ಕ್ರೀನ್ ಲೋಶನ್ ಮುಖಕ್ಕೆ ಲೇಪಿಸಿ .

PR
* ಕಪ್ಪು ದ್ರಾಕ್ಷಿ ಯೊಂದಿಗೆ ಸ್ವಲ್ಪ ಜೇನು ಬೆರಸಿ . ಆ ಮಿಶ್ರಣವನ್ನು ಪ್ರತಿದಿನ ಸ್ನಾನಕ್ಕೆ 20 ನಿಮಿಷಗಳಿಗೆ ಮುನ್ನವೇ ಲೇಪಿಸಿ . ಇಪ್ಪತ್ತು ನಿಮಿಷಗಳಾದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ ಮುಖವನ್ನು . ಇದು ನಿಮ್ಮ ವದನದ ಚರ್ಮವನ್ನು ತಾಜಾವಾಗಿಡುತ್ತದೆ.

* ಸ್ವಲ್ಪ ಕ್ಯಾರೆಟ್ , ಸ್ವಲ್ಪ ಎಲೆ ಕೋಸು ಮತ್ತು ಸ್ವಲ್ಪ ಓಟ್ಸ್ ಈ ಮೂರನ್ನು ಒಟ್ಟಿಗೆ ಬೆರಸಿ ರುಬ್ಬಿರಿ. ಈ ಮಿಶ್ರಣಕ್ಕೆ ಸ್ವಲ್ಪ ಹಾಲಿನ ಕೆನೆ, ಕಾಲು ಚಮಚೆ ಜೇನು ಮತ್ತು ಸ್ವಲ್ಪ ನಿಂಬೆ ಹಣ್ಣಿನ ರಸ ಬೆರಸಿರಿ. ಆ ಮಿಶ್ರಣವನ್ನು ಮುಖಕ್ಕೆ ಲೇಪಿಸಿ ತಪ್ಪದೆ. ಇದರಿಂದ ಮುಖದಲ್ಲಿರುವ ಕಪ್ಪು ಮಚ್ಚೆಗಳು ದೂರವಾಗುತ್ತದೆ.

* ಪಿಗ್ಮೆಂಟೇಷನ್ ಸಮಸ್ಯೆಯಿಂದ ಬಳಲುವವರು ಬಿಸಿಲಿನಲ್ಲಿ ತಿರುಗಾಡಿ ಬಂದ ಬಳಿಕ ಮುಖವನ್ನು ಸ್ವಚ್ಚವಾಗಿ ತೊಳೆದುಕೊಂಡು ಮುಖದ ಮೇಲೆ ಗುಂಡಗೆ ಹಚ್ಚಿರುವ ಸೌತೆಕಾಯಿ ಬಿಲ್ಲೆಗಳನ್ನು ಇಪ್ಪತ್ತು ಮಿಶಗಳ ಕಾಲ ಇತ್ತು ಕೊಂಡರೆ ಉತ್ತಮ ಫಲಿತಾಂಶ ಹೊಂದ ಬಹುದಾಗಿದೆ.

ವೆಬ್ದುನಿಯಾವನ್ನು ಓದಿ