ವಯಸ್ಸಾಗುವಿಕೆ ತಡೆಯಲು ಇಲ್ಲಿದೆ ಉಪಾಯ!

ಶುಕ್ರವಾರ, 9 ಮಾರ್ಚ್ 2018 (10:22 IST)
ಬೆಂಗಳೂರು: ನಾವು ಸೇವಿಸುವ ಆಹಾರಕ್ಕೆ ತಕ್ಕಂತೆ ನಮ್ಮ ಆಯಸ್ಸು, ಆರೋಗ್ಯ ಅಡಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಾದರೆ ವಯಸ್ಸಾಗುವಿಕೆ ತಡೆಯಲು ಯಾವ ಆಹಾರ ಸೇವಿಸಿದರೆ ಸೂಕ್ತ?

ಆಂಟಿ ಆಕ್ಸಿಡೆಂಟ್
ಆಂಟಿ ಆಕ್ಸಿಡೆಂಟ್ ಹೆಚ್ಚು ಇರುವ ಆಹಾರವನ್ನು ಸೇವಿಸುವುದು ನಮ್ಮ ಆಯಸ್ಸು ವೃದ್ಧಿಗೆ ಮುಖ್ಯ ದಾರಿ. ಮೆಂತೆ, ಸೊಪ್ಪು ತರಕಾರಿಗಳು,  ಕ್ಯಾರೆಟ್, ಬೀಟ್ ರೂಟ್, ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.

ಋತುವಿಗೆ ತಕ್ಕ ಆಹಾರ
ಋತುವಿಗೆ ತಕ್ಕದಾಗಿ ಆಹಾರ ಸೇವಿಸುವುದು ಮುಖ್ಯ. ಚರ್ಮಕ್ಕೆ ಆರೋಗ್ಯಕರವಾದ, ವಿಷಾಂಶ ಹೆಚ್ಚು ಬಳಸದ ಸಾವಯವ ಆಹಾರಗಳನ್ನೇ ಹೆಚ್ಚು ಬಳಸಿ.

ಉತ್ತಮ ಕೊಬ್ಬಿನಂಶ
ಶರೀರದ ಅಂಗಾಂಶ ಬೆಳವಣಿಗೆಗೆ ಉತ್ತಮ ಕೊಬ್ಬಿನಂಶದ ಅಗತ್ಯವಿದೆ. ಇದಕ್ಕಾಗಿ ಹೆಚ್ಚು ಒಣ ಹಣ್ಣುಗಳು, ಫ್ಯಾಟೀ ಆಸಿಡ್ ಹೆಚ್ಚು ಇರುವ ಆಹಾರಗಳನ್ನು ಸೇವಿಸಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ