ಕಾಲೇಜು ಹುಡುಗಿಯರು, ಮಹಿಳೆಯರು, ಗೃಹಿಣಿಯರು, ಮಕ್ಕಳು, ಕೆಲಸಗಳಿಗೆ ಹೋಗುವ ಮಹಿಳೆಯರು, ಮಧ್ಯಮ ವಯಸ್ಸಿನ ಮಹಿಳೆಯರು ಹೀಗೆ ಎಲ್ಲರೂ ಈ ನೇಲ್ ಆರ್ಟ್ ಗೆ ಮಾರುಹೋದವರೇ. ಇದು ಒಂದು ರೀತಿಯಲ್ಲಿ ಉಗುರುಗಳ ಮೇಲಿನ ಚಿತ್ತಾರದ ಮೂಲಕ ಕ್ರಿಯೇಟಿವಿಟಿಯನ್ನು ಓರೆಗೆ ಹಚ್ಚಿದಂತೆ. ಅವರವರ ಆಸಕ್ತಿಗಳಿಗೆ ಅನುಗುಣವಾಗಿ ಬಗೆ ಬಗೆಯ ನೇಲ್ ಆರ್ಟ್ ಗಳು ಸೃಷ್ಟಿಯಾಗುತ್ತಲೆ ಇರುತ್ತವೆ.
ಡಾಟ್ ಡಿಸೈನ್ ನ್ನು ಉಗಿರಿನ ಮೂಲೆಯಿಂದ ಆರಂಭಿಸಿ. ದೊಡ್ಡ ಡಾಟ್ ನಿಂದ ಚಿಕ್ಕ ಡಾಟ್ ಗಳನ್ನು ಮಾಡಿಕೊಳ್ಳಿ. ಡಾಟ್ ಡಿಸೈನ್ ನಲ್ಲಿ ವಿವಿಧ ರೀತಿಯ ಕಲರ್ ಕಾಂಬಿನೇಷನ್ ಗಳನ್ನು ನೀವೇ ಮಾಡಿಕೊಳ್ಳಬಹುದು. ಬಿಳಿ ಅಥವಾ ತಿಳಿ ಗುಲಾಬಿ ಬಣ್ಣದ ಪಾಲಿಶ್ ಮೇಲೆ ಕಪ್ಪುಬಣ್ಣದ ಡಾಟ್, ಕಪ್ಪು ಬಣ್ಣದ ಪಾಲಿಶ್ ಮೇಲೆ ಗೋಲ್ಡನ್ ಕಲರ್ ಡಾಟ್, ಡಾರ್ಕ್ ನೀಲಿ ಅಥವಾ ತೆಳು ನೀಲಿ ಬಣ್ಣದ ಪಾಲೀಶ್ ಮೇಲೆ ಕಪ್ಪು ಡಾಟ್ ಹಿಗೆ ನಿಮಗಿಷ್ಟದ ಕಲರ್ ಗಳನ್ನು ಟ್ರೈ ಮಾಡಬಹುದು.
ಇನ್ನೊಂದು ಸುಲಭ ಡಿಸೈನ್ ಎಂದರೆ ಒನ್ನೊಂದು ಉಗುರುಗಳಿಗೂ ಒನ್ನೊಂದು ಪಾಲಿಶ್. ಹೀಗೆ ಒನ್ನೊಂದು ಉಗುರಿಗೆ ಒನ್ನೊಂದು ಬಣ್ಣಗಳನ್ನು ಹಾಕಿಕೊಳ್ಳುವಾಗ ತುಂಬಾ ತಾಳ್ಮೆಯಿಂದ ಮಾಡಿಕೊಳ್ಳಬೇಕು. ಕಾರಣ ನಿಮ್ಮ ಉಗುರಿಗೆ ಯಾವ ಯಾವ ಬಣ್ಣಗಳು ಸುಂದರವಾಗಿ ಕಾಣಬಹುದು ಹಾಗೂ ಯಾವ ಬಣ್ಣದ ಬಳಿಕ ಯಾವ ಬಣ್ಣ ಬಂದಲ್ಲಿ ಇನ್ನಷ್ಟು ಆಕರ್ಷಣೀಯವಾಗಿ ಕಾಣಬಹುದು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಹೀಗೆ ಎಲ್ಲಾ ಉಗುರುಗಳಿಗೂ ಬಣ್ಣ ಹಾಕಿದ ಮೇಲೆ ಗ್ಲಿಟರ್ ಪಾಲಿಶ್ ಒಂದು ಲೇಯರ್ ಹಾಕಿದರೆ ಇನ್ನೂ ಆಕರ್ಷಣೀಯವಾಗಿ ಕಾಣುತ್ತದೆ.