ಲಿಪ್ ಸ್ಟಿಕ್ ಫಸ್ಟ್ ಟೈಮ್ ಟ್ರೈ ಮಾಡ್ತಿದಿರಾ…? ಹಾಗಿದ್ರೆ ಈ ಟಿಪ್ಸ್ ಅನುಸರಿಸಿ..

ಸೋಮವಾರ, 4 ಸೆಪ್ಟಂಬರ್ 2017 (14:19 IST)
ಬೆಂಗಳೂರು: ಹುಡುಗಿರಯರಿಗೆ ಗ್ಲಾಮರಸ್ ಲುಕ್ ನೀಡುತ್ತೆ ಲಿಪ್ ಸ್ಟಿಕ್.. ಹೀಗಾಗಿಯೇ ಹುಡುಗಿಯರಿಗೆ ಲಿಪ್ ಸ್ಟಿಕ್ ಅಚ್ಚುಮೆಚ್ಚು. ಆದರೆ ಇಲ್ಲಿಯವರೆಗೂ ಕೆಲವರು ಲಿಪ್ ಸ್ಟಿಕ್ ಬಳಸಿಯೇ ಗೊತ್ತಿಲ್ಲ. ಅಂತಹವರಿಗೆ  ಲಿಪ್ ಸ್ಟಿಕ್ ಹೇಗೆ ಬಳಸೋದು ಅನ್ನೋದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿದೆ. ಬಳಸಿ ನೋಡಿ…

ನಾವು ಯಾವುದೇ ಕಂಪನಿಯ ಪ್ರಾಡಕ್ಟ್ ತೆಗೆದುಕೊಳ್ಳುವುದಕ್ಕೂ ಮೊದಲು ಅದರ ಬಗ್ಗೆ ತಿಳಿದು ಬಳಸುವುದು ಒಳ್ಳೆಯದು. ಒಳ್ಳೆಯ ಬ್ರ್ಯಾಂಡ್ ನೋಡಿ ನಿಮಗೆ ಯಾವುದು ಒಪ್ಪುತ್ತೊ ಅದನ್ನು ತೆಗೆದುಕೊಳ್ಳಿ.

ಕಾಸ್ಲಿ ಲಿಪ್‌ ಸ್ಟಿಕ್‌ ಆದರೂ, ಕಡಿಮೆ ಬೆಲೆಯಾದರೂ ಗುಣಮಟ್ಟ ನೋಡಿ ಖರೀದಿಸಿ. ಒಂದುವೇಳೆ ದುಬಾರಿ ಬೆಲೆಯ ಲಿಪ್‌ಸ್ಟಿಕ್‌ ಖರೀದಿಸಿ ನಿಮಗೆ ಹಿಡಿಸದೆ ಇದ್ದಲ್ಲಿ ಅಥವಾ ನಿಮ್ಮ ತುಟಿಗಳಿಗೆ ಮ್ಯಾಚ್‌ ಆಗದಿದ್ದರೆ ಸುಮ್ಮನೆ ವೇಸ್ಟ್‌ ಆಗುತ್ತೆ.

ಲಿಪ್ ಸ್ಟಿಕ್ ಹಚ್ಚುವುದು ಹೇಗೆ..?

ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚುವ ಮೊದಲು ಲಿಪ್ ಬಾಮ್ ಹಚ್ಚಿ. ಯಾಕೆಂದರೆ ಒಣ ತುಟಿಗಳನ್ನು ಹಸಿಯಾಗಿಸಿದರೆ ಹಚ್ಚಿದ ಲಿಪ್ ಸ್ಟಿಕ್ ಬಹಳ ಹೊತ್ತು ಇರುತ್ತೆ. ಲಿಪ್‌ ಬಾಮ್‌ ಹಚ್ಚಿದ ಬಳಿಕ ಲಿಪ್ ಲೈನರ್ ನಿಂದ ಮಾರ್ಕ್ ಮಾಡಿಕೊಳ್ಳಿ.

ನಿಮ್ಮ ತುಟಿ ಬಣ್ಣದ ಅಥವಾ ಪಾರದರ್ಶಕವಾದ ಲಿಪ್‌‌ಸ್ಟಿಕ್‌ ಆಯ್ಕೆ ಮಾಡಿಕೊಳ್ಳಿ. ಬ್ರಷ್ ನಿಂದಲೂ ಲಿಪ್ ಸ್ಟಿಕ್ ಹಚ್ಚಬಹುದು. ತುಟಿಯ ಮಧ್ಯೆ ಲಿಪ್ ಸ್ಟಿಕ್ ಇಟ್ಟು ಬ್ರಷ್ ನಿಂದ ಎಲ್ಲ ಕಡೆಗೂ ಸರಿಸಮವಾಗಿ ಹರಡಿ.

ಶೈನಿಂಗ್ ಬರಲು, ಲಿಪ್ ಸ್ಟಿಕ್ ಮೇಲೆ, ಗ್ಲೋಸ್ ಹರಡಿ. ನಿಮ್ಮ ತುಟಿಗಳು ಇನ್ನೂ ಆಕರ್ಷಕವಾಗಿ ಕಾಣಬೇಕು ಅಂದರೆ ಲಿಪ್ ಸ್ಟಿಕ್  ಮೇಲೆ ಲಿಪ್‌ ಜೆಲ್‌ ಹಚ್ಚಿ. ಈ ಮೂಲಕ ಎಲ್ಲರ ಮಧ್ಯೆ ನೀವು ಸಹ ಸ್ಟೈಲಿಶ್‌ ಆಗಿ ಕಾಣಿ…

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ