ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಸರಳ ಉಪಾಯಗಳು

ಬುಧವಾರ, 6 ಜೂನ್ 2018 (17:55 IST)
ಮುಖವನ್ನು ಸ್ಕ್ರಬ್‌ ಮಾಡುವುದು ಮಹಿಳೆಯರಿಗೆ ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಪುರುಷರಿಗೂ ಇದೆ. ಸತ್ತ ಚರ್ಮ ಹಾಗೂ ಅಧಿಕ ಎಣ್ಣೆಯ ಅಂಶ ಮೂಗು, ಗಲ್ಲ ಹಾಗೂ ಹಣೆಯ ಚರ್ಮದ ಮೇಲೆ ಸಂಗ್ರಹವಾಗುವುದರಿಂದ ಬ್ಲ್ಯಾಕ್ ಹೆಡ್ಸ್ ಉಂಟಾಗುತ್ತದೆ.
ಮನೆಯಲ್ಲಿಯೇ ಸುಲಭವಾಗಿ ಬ್ಲ್ಯಾಕ್‌ಹೆಡ್ಸ್‌ ನಿವಾರಣೆಗೆ ಸ್ಕ್ರಬ್‌ ತಯಾರಿಸಬಹುದು
 
1. ಅಡುಗೆ ಸೋಡಾ
- 2-3 ಚಮಚ ಅಡುಗೆ ಸೋಡಾವನ್ನು  1 ಚಮಚ ನೀರಿನಲ್ಲಿ ಬೆರೆಸಿ. ಅದನ್ನು ಬ್ಲ್ಯಾಕ್ ಹೆಡ್ಸ್ ಇರುವಲ್ಲಿ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ 1 ವಾರ ಮಾಡಿದರೆ ಬ್ಲ್ಯಾಕ್ ಹೆಡ್ಸ್ ನಿವಾರಣೆಗೆಯಾಗುತ್ತದೆ.
 
2. ನಿಂಬೆ ರಸ
- ನಿಂಬೆ ಹಣ್ಣಿನಿಂದ ಮುಖವನ್ನು ಸ್ಕ್ರಬ್ ಮಾಡಿ.
- 2 ಚಮಚ ನಿಂಬೆಯ ರಸಕ್ಕೆ 1/4 ಚಮಚ ಉಪ್ಪು ಹಾಕಿ ಬೆರೆಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಬೆಚ್ಚಗಿನ ನೀರಲ್ಲಿ ಮುಖವನ್ನು ತೊಳೆಯಿರಿ.
 
3. ಜೇನು ತುಪ್ಪ
- 1 ಚಮಚ ಜೇನು ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ, ಈ ಬೆಚ್ಚಗಿನ ಜೇನು ತುಪ್ಪವನ್ನು ಬ್ಲ್ಯಾಕ್‌ಹೆಡ್ಸ್‌ ಇರುವಲ್ಲಿ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬಿಸಿ ನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಒರೆಸಿ.
 
4. ಚಕ್ಕೆ
- 1 ಚಮಚ ಚಕ್ಕೆ ಪುಡಿಗೆ 2 ಚಮಚ ಜೇನು ತುಪ್ಪವನ್ನು ಬೆರೆಸಿ, ಬ್ಲ್ಯಾಕ್‌ಹೆಡ್ಸ್‌ ಇರುವಲ್ಲಿ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಮುಖವನ್ನು ತೊಳೆಯಿರಿ.
 
5. ಟೊಮೇಟೊ
- ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ನೀರಿನಲ್ಲಿ ಮುಖ ತೊಳೆಯಿರಿ.
 
6. ಮೊಟ್ಟೆಯ ಬಿಳಿಭಾಗ
- ಮೊಟ್ಟೆಯ ಬಿಳಿಭಾಗಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ, ಮುಖಕ್ಕೆ ಹಚ್ಚಿ ಅದು ಒಣಗಿದ ನಂತರ ಸ್ವಲ್ಪ ನೀರನ್ನು ಮುಖಕ್ಕೆ ಹಾಕಿ ಸ್ಕ್ರಬ್ ಮಾಡಿ , ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.
 
7. ಟೂತ್‌ಪೇಸ್ಟ್
- ಟೂತ್‌ಪೇಸ್ಟ್ ಅನ್ನು ಬ್ಲ್ಯಾಕ್‌ಹೆಡ್ಸ್‌ ಇರುವ ಸ್ಥಳಕ್ಕೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ