ಆರೋಗ್ಯಯುತ ಹೊಳೆಯುವ ಚರ್ಮಕ್ಕೆ ವಿಟಮಿನ್ ಸೂತ್ರ

IFM
ಹೊಳೆಯುವ ಚೆಂದದ ಆರೋಗ್ಯಯುತ ಚರ್ಮ ಬೇಕೆಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲರೂ ತಮ್ಮ ಚರ್ಮವನ್ನು ಇನ್ನಷ್ಟು ಹೊಳೆಯುವಂತೆ ಮಾಡಲು ನೂರಾರು ವಿಧಾನಗಳಿಗೆ ಶರಣು ಹೋಗುತ್ತಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯಯುತ ಚರ್ಮ ಪಡೆಯಲು ನೀವು ತಿನ್ನುವ ಆಹಾರದಲ್ಲಿರುವ ವಿಟಮಿನ್, ಮಿನರಲ್‌ಗಳೂ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಹೆಚ್ಚು ಗಮನಿಸಬೇಕು.

ವಿಟಮಿನ್ ಎ
ವಿಟಮಿನ್ ಎ ಆರೋಗ್ಯಯುತ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಚರ್ಮವನ್ನು ಸದೃಢಗೊಳಿಸುತ್ತದೆ. ಮೊಡವೆ ಇರುವ ಚರ್ಮದವರಿಗೆ ಹಾಗೂ ಒಣ ಚರ್ಮದವರಿಗೆ ವಿಟಮಿನ್ ಎ ಇರುವ ಆಹಾರ ಉತ್ತಮ. ಚರ್ಮದಲ್ಲಿ ಸುಕ್ಕು ಬರದಂತೆಯೂ ವಿಟಮಿನ್ ಎ ಸಂರಕ್ಷಿಸುತ್ತದೆ. ಟೊಮ್ಯಾಟೋ, ಕಲ್ಲಂಗಡಿ ಹಣ್ಣು, ಪೀಚ್, ಕಿವಿ, ಕಿತ್ತಳೆ, ಬ್ಲ್ಯಾಕ್‌ಬೆರ್ರಿಗಳಲ್ಲಿರುತ್ತದೆ. ಆಲೂಗಡ್ಡೆ, ಕ್ಯಾರೆಟ್‌ಗಳಲ್ಲದೆ, ಪಿಸ್ತಾ, ಚೀನಿಕಾಯಿ ಬೀಜ, ಸೂರ್ಯಕಾಂತಿ ಬೀಜ, ಬಾದಾಮಿಗಳಲ್ಲೂ ವಿಟಮಿನ್ ಎ ಇರುತ್ತದೆ.

ವಿಟಮಿನ್ ಬಿ
ವಿಟಮಿನ್ ಬಿ ಚರ್ಮಕ್ಕೆ ಚೆನ್ನಾಗಿ ಟೋನ್ ಮಾಡುತ್ತದೆ. ಆರೋಗ್ಯವಾಗಿರಿಸುತ್ತದೆ. ಒತ್ತಡ ಹೆಚ್ಚಿದ್ದರೂ ವಿಟಮಿನ್ ಬಿ ಅದನ್ನು ತಗ್ಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಬಿ1 ರೋಗನಿರೋಧಕವಾಗಿ ಹೋರಾಡುತ್ತದೆ ಹಾಗೂ ವಿಷಕಾರಕಗಳಿಂದ ಮುಕ್ತಿ ನೀಡುವ ಜತೆಗೆ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ವಿಟಮಿನ್ ಬಿ2 ಚರ್ಮವನ್ನು ಆರೋಗ್ಯವಾಗಿಡುತ್ತದೆ. ಮೊಡವೆಗಳಿಗೂ ಇದು ಉತ್ತಮ ಪರಿಹಾರ ನೀಡುತ್ತದೆ. ವಿಟಮಿನ್ ಬಿ3 ರಕ್ತಸಂಚಾರವನ್ನು ಅಧಿಕಗೊಳಿಸುತ್ತದೆ. ವಿಟಮಿನ್ ಬಿ5 ಒತ್ತಡವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಬಿ6 ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

MOKSHA
ವಿಟಮಿನ್ ಬಿ1 ಬಟಾಣಿ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿರುತ್ತದೆ. ವಿಟಮಿನ್ ಬಿ2 ಕಿವಿ ಹಣ್ಣಿನಲ್ಲಿ ಹೆಚ್ಚಿರುತ್ತದೆ. ವಿಟಮಿನ್ ಬಿ3 ಟೊಮ್ಯಾಟೋ, ಪೀಚ್, ಕಿವಿ, ಕಲ್ಲಂಗಡಿ ಹಣ್ಣು, ಜೋಳ, ಅಣಬೆ, ಬಟಾಣಿ, ಅಲೂಗಡ್ಡೆ, ಕಡ್ಲೆಕಾಯಿ, ಬಾದಾಮಿಗಳಲ್ಲಿರುತ್ತದೆ. ಬಾಳೆಹಣ್ಣು, ಕಿತ್ತಳೆ, ಗೆಣಸು, ಆಲುಗಡ್ಡೆ, ಜೋಳ, ಬೀನ್ಸ್, ಅಣಬೆ, ಹೂಕೋಸು, ಕ್ಯಾರೆಟ್‌ಗಳ್ಲಲಿ ಇರುತ್ತವೆ. ಬಿ6 ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಕ್ಯಾರೆಟ್, ಬಟಾಣಿಗಳಲ್ಲಿರುತ್ತವೆ.

ವಿಟಮಿನ್ ಸಿ
ವಿಟಮಿನ್ ಸಿ ಯಾವಾಗಲೂ ಗಾಯ ಗುಣಪಡಿಸುವುದರಲ್ಲಿ ಎತ್ತಿದ ಕೈ. ಹೀಗಾಗಿ ಇದೂ ಕೂಡಾ ಹಾನಿಯಾದ ಚರ್ಮವನ್ನು ಬೇಗನೆ ಗುಣಪಡಿಸುತ್ತದೆ. ಚರ್ಮವನ್ನು ಮತ್ತೆ ಹೊಳಪು ಬರುವಂತೆ ತಾಜಾವಾಗಿ ಇಡುತ್ತದೆ. ಅಲ್ಲದೆ ಇದು ರೋಗನಿರೋಧಕ ಶಕ್ತಿಯನ್ನೂ ವೃದ್ಧಿಪಡಿಸುತ್ತದೆ. ಕಿವಿ, ಸ್ಟ್ರಾಬೆರ್ರಿ, ಕಿತ್ತಳೆ, ಬ್ಲ್ಯಾಕ್‌ಬೆರ್ರಿ, ಕಲ್ಲಂಗಡಿ, ಟೊಮ್ಯಾಟೋ, ನಿಂಬೆ, ಪೀಚ್, ನೆಲ್ಲಿಕಾಯಿ, ದ್ರಾಕ್ಷಿ, ಕ್ಯಾರೆಟ್, ಹೂಕೋಸು, ಜೋಳ, ಸೌತೆಕಾಯಿ, ಅಣಬೆ, ಬಟಾಣಿ, ಆಲುಗಡ್ಡೆ, ಗೆಣಸುಗಳಲ್ಲಿ ವಿಟಮಿನ್ ಸಿ ಇರುತ್ತದೆ.

ವಿಟಮಿನ್ ಡಿ ಚರ್ಮದ ಮೇಲಾಗುವ ಕಪ್ಪು ಚುಕ್ಕೆಗಳನ್ನು ತಡೆಯುತ್ತದೆ. ಸೂರ್ಯನ ಬೆಳಕಿನ್ಲಲಿ ಯಥೇಚ್ಛವಾಗಿ ವಿಟಮಿನ್ ಡಿ ಇರುತ್ತದೆ. ಅದು ಬಿಟ್ಟರೆ ಅಣಬೆಯಲ್ಲೂ ವಿಟಮಿನ್ ಡಿ ದಕ್ಕುತ್ತದೆ.

ವಿಟಮಿನ್ ಇ
ವಿಟಮಿನ್ ಇ ಯಾವಾಗಲೂ ಬ್ಯಾಕ್ಟೀರಿಯಾ, ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಹಾಗಾಗಿ ವಿಟಮಿನ್ ಇ ಇರುವ ಆಹಾರ ಸೇವಿಸುತ್ತಿದ್ದರೆ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಸೂರ್ಯನಿಂದ ಅಥವಾ ಇನ್ನಾವುದರಿಂದಾದಲೂ ಚರ್ಮಕ್ಕೆ ಹಾನಿಯಾದಲ್ಲಿ ವಿಟಮಿನ್ ಇ ಇರುವ ಆಹಾರವನ್ನು ಯಥೇಚ್ಛವಾಗಿ ಸೇವಿಸಬಹುದು. ವಿಟಮಿನ್ ಇ ಹೆಚ್ಚಿರುವ ಬ್ಲ್ಯಾಕ್‌ಬೆರ್ರಿ, ಬಾಳೆಹಣ್ಣು, ಆಪಲ್, ಕಿವಿ ಹಣ್ಣುಗಳನ್ನು ಸೇವಿಸಿ. ಬಾದಾಮಿ, ಕಡ್ಲೆಬೀಜಗಳಲ್ಲೂ ವಿಟಮಿನ್ ಇ ಇರುತ್ತದೆ. ತಿನ್ನುವ ಜತ್ಗೆ ಬಾಳೆಹಣ್ಣು, ಆಪಲ್‌, ಬಾದಾಮಿಗಳನ್ನು ಮುಖಕ್ಕೆ ಲೇಪಿಸಿದರೂ ಚರ್ಮ ಕಾಂತಿಯುಕ್ತವಾಗುತ್ತದೆ.

ಈ ಎಲ್ಲ ಹಣ್ಣು ತರಕಾರಿಗಳನ್ನು ಬಳಸುತ್ತಿದ್ದರೆ, ಚರ್ಮ ಆರೋಗ್ಯಕರವಾಗಿರುತ್ತದೆ. ಅದರ್ಲಲೂ ಹಣ್ಣು ಹೆಚ್ಚು ಸೇವಿಸಿ. ಹಸಿಯಾಗಿ ತಿನ್ನಬಲ್ಲ ತರಕಾರಿಗಳನ್ನು (ಉದಾ- ಕ್ಯಾರೆಟ್, ಸೌತೆಕಾಯಿ...) ಹಸಿಯಾಗಿಯೇ ತಿನ್ನಿ. ಮುಖಕ್ಕೂ ಹಣ್ಣು, ತರಕಾರಿಗಳ ಲೇಪನ ಉತ್ತಮ.