ಚಳಿಗಾಲದಲ್ಲಿ ಕೂದಲು ಹೆಚ್ಚಾಗಿ ತೊಂದರೆಗೆ ಈಡಾಗುತ್ತದೆ. ಅದರಲ್ಲೂ ಶುಷ್ಕತೆ ಯಿಂದ ಕೂದಲ ಸೌಂದರ್ಯದ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ. ಹೊಟ್ಟು, ಕೂದಲು ಉದುರುವುದು, ಕೊನೆಗಳು ಒಡೆಯುವಂತಹ ಸಮಸ್ಯೆ ಯುಂಟಾಗುತ್ತದೆ. ಈ ಸಮಸ್ಯೆಯಿಂದ ದೂರವಾಗಲು ಕೂದಲು ಒಣಗಿದಂತೆ ಇರಲು ಪೂರಕವಾದ ಕ್ರಮ ಕೈಗೊಳ್ಳ ಬೇಕು. ಆದಷ್ಟು ಕೂದಲನ್ನು ಗಾಳಿ ಬಿಸಿಲಿಗೆ ಕೂದಲನ್ನು ಒಡ್ದದಿರಿ. ಧೂಳು ಸಹ ಕೂದಲ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಹೊರಗಡೆ ಓಡಾಡುವಾಗ ತಪ್ಪದೆ ಕೂದಲನ್ನು ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ.
ಬಿಸಿಬಿಸಿ ನೀರಿನಿದ ಸ್ನಾನ ಮಾಡ ಬೇಡಿ. ಅತಿ ತೀಕ್ಷ್ಣವಾದ ಸೋಪು ಶ್ಯಾಪು ಬಳಸದಿರಿ . ಅತಿಯಾದ ಬಿಸಿ ಕೂದಲ ಬುಡದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಕೂದಲ ಬುಡಕ್ಕೆ ತಪ್ಪದೆ ಮಾಯಿಶ್ಚರೈಸರ್ ಬಳಸಿ. ಆಗ ಬುಡದ ಚರ್ಮದ ತಾಜಾತನ ಉಳಿಯುವಂತೆ ಮಾಡುತ್ತದೆ. ಈ ಕಾಲದಲ್ಲಿ ಪ್ರೋಟೀನ್ ಭರಿತ ಆಹಾರ ಉಪಯೋಗಿಸಿ, ಸ್ನಾನ ಮಾಡಲು ಪ್ರೋಟೀನ್ ಭರಿತ ಶ್ಯಾಂಪು ಉಪಯೋಗಿಸಿ.