ಪ್ರಾಕೃತಿಕ ಮಾಯಿಶರೈಸರ್ ಬಗ್ಗೆ ನಿಮಗೆ ಗೊತ್ತೇ !

ಬುಧವಾರ, 22 ಜನವರಿ 2014 (09:50 IST)
PR
ಕೆಲವರಿಗೆ ಅಂಗಡಿಯಲ್ಲಿ ಸಿಗುವ ಮಾಯಿಸ್ಚರೈಸರ್ ಬಳಕೆ ಮಾಡಲು ಇಷ್ಟ ಆಗುವುದಿಲ್ಲ. ಇನ್ನು ಕೆಲವರಿಗೆ ಅದರಿಂದ ಅಲರ್ಜಿ ಉಂಟಾಗುತ್ತದೆ. ಅಂತಹವರಿಗೆಂದು ಕೆಲವೊಂದು ಪ್ರಾಕೃತಿಕ ಮಾಯಿಶ್ಚರೈಸರ್ ಗಳ ಬಗ್ಗೆ ನೀಡಲಾಗಿದೆ. ಅವುಗಳನ್ನು ಬಳಸಿ ಚರ್ಮದ ರಕ್ಷಣೆ ಮಾಡಿಕೊಳ್ಳಿ.

*ಜೇನು, ಮೊಟ್ಟೆಯ ಬಿಳಿ ಭಾಗ, ಬಾಳೆಹಣ್ಣಿನ ಸಿಪ್ಪೆ,ಕ್ಯಾರೆಟ್ ತುರಿ, ಇಲ್ಲವೇ ಗಡ್ದೆ ಕೋಸು ಇವುಗಳಲ್ಲಿ ಯಾವುದಾದರು ಒಂದರ ಪ್ಯಾಕ್ ಮುಖಕ್ಕೆ ಲೇಪಿಸಿ. ಮೊಟ್ಟೆ ಮತ್ತು ಜೇನನ್ನು ಹೊರತು ಪಡಿಸಿ ಉಳಿದವಕ್ಕೆ ಮೊಸರು ಇಲ್ಲವೇ ಮಜ್ಜಿಗೆಯಿಂದ ರುಬ್ಬಿ ಪ್ಯಾಕ್ ಹಾಕಿಕೊಳ್ಳಿ.

*ಕ್ಯಾಕ್ಟಸ್, ನಿಂಬೆ ರಸ ಮತ್ತು ಅಲುವಿರಾಗಳ ಮಿಶ್ರಣವು ಸಹ ಚರ್ಮದ ತಾಜಾತನ ಕಾಪಾಡುತ್ತದೆ. ಆದರೆ ಇದು ಕೆಲವರಿಗೆ ಅಲರ್ಜಿ ಉಂಟು ಮಾಡುತ್ತದೆ. ಆ ಬಗ್ಗೆ ಗಮನ ಇರಲಿ.

*ಗೋಧಿ, ಗಡ್ಡೆ ಕೋಸು , ಕ್ಯಾರೆಟ್ ಮತ್ತು ಬಾದಾಮಿಗಳ ಮಿಶ್ರಣವು ಸಹ ಚಳಿಗಾಲಕ್ಕೆ ಹೆಚ್ಚು ಉಪಯುಕ್ತ.

ವೆಬ್ದುನಿಯಾವನ್ನು ಓದಿ