ಸರಳತೆ ನಿಮ್ಮ ಅಲಂಕಾರದಲ್ಲಿರಲಿ

ಸೋಮವಾರ, 6 ಜನವರಿ 2014 (12:11 IST)
PR
ಸಾಮಾನ್ಯವಾಗಿ ಯಾರಿಗೆ ಆಗಲಿ ತಾವು ಸುಂದರವಾಗಿ ಕಾಣ ಬೇಕು ಎನ್ನುವ ಮನಸ್ಥಿತಿ ಇದ್ದೆ ಇರುತ್ತದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಇತರರಿಗಿಂತ ಹೆಚ್ಚು ಅಂದವಾಗಿ ಕಾಣ ಬೇಕು ಎಂದು ಬಯಸುತ್ತಾರೆ. ಅವರಿಗೆಂದು ಕೆಲವೊಂದು ಟಿಪ್ಸ್ ಇಲ್ಲಿವೆ.

ನೀವು ಕಣ್ಣಿನ ಕೆಳಗೆ ಇರುವ ಕಪ್ಪು ವರ್ತುಲಗಳನ್ನು ಮೇಕಪ್ ನಿಂದ ಮುಚ್ಚಿ ಇದು ನಿದ್ರೆ ಬಂದಂತೆ ಕಾಣುವುದನ್ನು ತಡೆಯುತ್ತದೆ. ನಿಮಗೆ ಹೊಂದುವ ಮೇಕಪ್ ಕ್ರೀಮ್ ಗಳನ್ನೂ ತಪ್ಪದೆ ಬಳಸಿ ಅಲಂಕರಿಸಿಕೊಳ್ಳಿ.. ಫೌಂಡೇಷನ್..., ಇತ್ಯಾದಿ.

ನೀವು ಚರ್ಮವನ್ನು ಸದಾ ತಾಜಾವಾಗಿ ಇಟ್ಟುಕೊಳ್ಳಲು ಮಾಯಿಶ್ಚ ರಿಸರ್ ಬಳಸಿ
ಕಣ್ಣಿಗೆ ಕಾಡಿಗೆ, ತುಟಿಗೆ ತೆಳುವಾದ ಬಣ್ಣ ತಪ್ಪದೆ ಬಳಸಿ. ಇದು ನಿಮ್ಮ ಕಣ್ಣು ಮತ್ತು ಆಧಾರದ ಹೊಳಪನ್ನು ಹೆಚ್ಚು ಮಾಡುತ್ತದೆ. ನಿಮ್ಮ ರೂಪವು ಇತರರಿಗಿಂತ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಆದಷ್ಟು ಎಲೆಕ್ಟ್ರಿಕ್ ನೀಲಿ ಐ ಶ್ಯಾಡೋ ಬಳಸದಿರಿ. ಇದು ನಿಮ್ಮ ರೂಪವು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ. ನೀವು ಉದ್ದ ಉಗುರು, ಕೃತಕ ಉಗುರನ್ನು ಬಳಸದಿರಿ. ನಿಮ್ಮ ಉಗುರುಗಳು ಚಿಕ್ಕದಾಗಿದ್ದು, ಆದಷ್ಟು ನೈಸರ್ಗಿಕ ಬಣ್ಣವನ್ನು ಧರಿಸಿ.

ವೆಬ್ದುನಿಯಾವನ್ನು ಓದಿ