ಚರ್ಮದ ಸಮಸ್ಯೆಗೆ ಬೆಸ್ಟ್ ಮೆಡಿಸಿನ್!

ಗುರುವಾರ, 16 ಜೂನ್ 2022 (09:25 IST)
ಹೆಣ್ಣು ಮಕ್ಕಳಿಗೆ ತ್ವಚೆ ಹಾಗೂ ಕೂದಲು ಬಗ್ಗೆ ಎಷ್ಟು ಕಾಂಶಿಯಸ್ ಆಗಿ ಇರ್ತಾರೆಂದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ರಾಡಕ್ಟಗಳನ್ನೂ ಟ್ರೈ ಮಾಡಿರುತ್ತಾರೆ.
 
ಆದರೂ ಕೂದಲು ಉದುರುವುದು, ದಟ್ಟಣೆ, ಸ್ಪಿಲಿಟ್ಸ್ ಸಮಸ್ಯೆಗಳು ಕಾಣಿಸುವುದು ಮಾತ್ರ ತಪ್ಪುವುದಿಲ್ಲ. ಮನೆಯಲ್ಲೇ ಕೆಲವು ಔಷಧಿಗಳನ್ನು ಮಾಡಿದರೂ ರಿಸಲ್ಟ್ ಮಾತ್ರ ಸಿಗುವುದೇ ಇಲ್ಲ ಎನ್ನುವವರಿಗೆ ಇಲ್ಲೊಂದು ಆಯಿಲ್ ಇದೆ. ಅದನ್ನು ಡೈರೆಕ್ಟ್ ಆಗಿ ಕೂದಲು ಹಾಗೂ ಚರ್ಮಕ್ಕೆ ಬಳಸಿದರೆ ಆಶ್ಚರ್ಯ ಪಡುವಂತಹ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.

ತಾಳೆ ಎಣ್ಣೆ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಈಗಂತು ಮಾರ್ಕೆಟನಲ್ಲಿ ಸಿಗುವ ಎಷ್ಟೋ ಕಾಸ್ಮೆಟಿಕ್ಸಗಳಲ್ಲಿ ತಾಳೆ ಎಣ್ಣೆಯನ್ನು ಬಳಸಿರುತ್ತಾರೆ. ಈ ಎಣ್ಣೆ ಬಳಸುವುದರಿಂದ ಕೂದಲು ಹಾಗೂ ಚರ್ಮಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ಪಡೆಯಬಹುದು.

ನೈಸರ್ಗಿಕವಾಗಿ ಸಿಗುವ ಎಷ್ಟೋ ವಸ್ತುಗಳು ನಮ್ಮ ಆರೋಗ್ಯ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅಲೋವೆರ, ಮೆಹೆಂದಿ ಸೊಪ್ಪು, ಕರಿಬೇವಿನ ಎಲೆ, ಹರಳೆಣ್ಣೆ ಹೀಗೆ ಎಲ್ಲವೂ ನಮ್ಮ ಚರ್ಮ ಹಾಗೂ ಕೂದಲಿಗೆ ಒಳ್ಳೆಯ ಮೆಡಿಸಿನ್ ಎಂದು ಹಿರಿಯರು ಹೇಳುತ್ತಾರೆ.

ಸೀಗೆಕಾಯಿಯನ್ನು ಬಳಸಿದರೆ ಕೂದಲು ಹಾಗೂ ಚರ್ಮ ಎರಡೂ ಆರೋಗ್ಯಕರವಾಗಿ ಹಾಗೂ ಕಾಂತಿಯುಕ್ತವಾಗಿ ಇರುವಂತೆ ನೋಡಿಕೊಳ್ಳುತ್ತದೆ ಎನ್ನುತ್ತಾರೆ. ಅದನ್ನು ಬಳಸಿರುವವರೂ ಇದ್ದಾರೆ. ಇದೇ ಸಾಲಿನಲ್ಲಿ ಈಗ ತಾಳೆ ಎಣ್ಣೆಯೂ ಫೇಮಸ್ ಆಗ್ತಿದೆ. ಇದರಿಂದ ಹಲವು ಪ್ರಯೋಜನಗಳಿವೆ.

  1. ಹಿಂದಿನ ಕಾಲದಲ್ಲೆಲ್ಲಾ ತಲೆಗೆ ಎಣ್ಣೆ ಹಚ್ಚಿ, ಜಡೆ ಹಾಕಿ ಮಡಚಿ ಕಟ್ಟುತ್ತಿದ್ದರು. ಆಗೆಲ್ಲ ಕೂದಲು ದಪ್ಪ ಹಾಗೂ ಉದ್ದವಾಗಿ ಇರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಕೂದಲಿಗೆ ಎಣ್ಣೆ ಹಾಕುವುದಿರಲಿ ಅದನ್ನು ಕಟ್ಟುವುದೂ ಇಲ್ಲ. ಗಾಳಿಗೆ ಹಾರಿಬಿಡುವುದರಿಂದ ಕೂದಲು ಹಾಳಾಗುತ್ತದೆ. ತಾಳೆ ಎಣ್ಣೆಯಲ್ಲಿ ಆಯಂಟಿ ಬ್ಯಾಕ್ಟೀರಿಯಾ ಹಾಗೂ ಆಂಟಿ ಫಂಗಲ್ ಅಂಶವು ಇರುವುದರಿಂದ ತಲೆಯ ಬುರುಡೆ ಡ್ರೈ ಆಗದಿರುವಂತೆ ನೋಡಿಕೊಳ್ಳುತ್ತದೆ.
  2.  
2. ಬೇಸಿಗೆಯಲ್ಲಿ ತಾಳೆ ಎಣ್ಣೆ ಬಳಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಸಮಸ್ಯೆಗಳು ದೂರವಾಗುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್, ವಿಟಮಿನ್ ಇ ಇದ್ದು, ಟ್ಯಾನ್(), ಸನ್ಬರ್ನ, ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸುತ್ತದೆ.
3. ಪ್ರತೀ ದಿನ ತಾಳೆ ಎಣ್ಣೆಯನ್ನು ಮೈ ಕೈಗೆ ಹಚ್ಚುವುದರಿಂದ ವಯಸ್ಸಾದ ನಂತರ ಕಾಣಿಸಿಕೊಳ್ಳುವ ಚರ್ಮದ ಸುಕ್ಕಿನ ಸಮಸ್ಯೆಗಳು, ಫೈನ್ ಲೈನ್ಸಗಳು ದೂರವಾಗುತ್ತವೆ.

4. ಬೇಸಿಗೆಯಲ್ಲಿ ಎಷ್ಟೇ ಸನ್ಸ್ಕ್ರೀನ್ ಹಚ್ಚಿದರೂ ಚರ್ಮ ಒಣಗಿಹೋಗುತ್ತದೆ. ತಾಳೆ ಎಣ್ಣೆ ಹಚ್ಚುವುದರಿಂದ ಇದರಲ್ಲಿನ ವಿಟಮಿನ್ ಇ, ಎ ಮತ್ತು ಕೆಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಚರ್ಮಕ್ಕೆ ನ್ಯೂಟ್ರೀಶಿಯಸ್ ಒದಗಿಸುವುದರ ಜೊತೆಗೆ ರಕ್ತ ಸಂಚಾರ, ಚರ್ಮ ಒಣಗುವುದನ್ನು ಕಡಿಮೆ ಮಾಡುವುದು ಹಾಗೂ ತ್ವಚೆಯು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.

5. ತಾಳೆ ಎಣ್ಣೆಯಲ್ಲಿ ಬಿಟಾ ಕೆರೋಟಿನ್ ಅಂಶವಿದೆ. ಹಾಗಾಗಿ ಕುದಲು ಸ್ಪಿಟ್ಸ್ ಆಗುವುದನ್ನು ತಡೆಯುತ್ತದೆ. ಜೊತೆಗೆ ವಿಟಮಿನ್ ಕೆ ಮತ್ತು ಇಅಂಶವನ್ನು ಕೂದಲಿಗೆ ಒದಗಿಸಿ ಬೆಳೆಯುವಂತೆ ಮಾಡುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ